Tuesday, April 30, 2024
Homeತಾಜಾ ಸುದ್ದಿಅನಾರೋಗ್ಯ ಎಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಸ್ಟೀಲ್ ಸ್ಪೂನ್ ಗಳು; ಅಂದ್ಹಾಗೆ ಚಮಚಗಳು...

ಅನಾರೋಗ್ಯ ಎಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಹೊಟ್ಟೆಯಲ್ಲಿತ್ತು 63 ಸ್ಟೀಲ್ ಸ್ಪೂನ್ ಗಳು; ಅಂದ್ಹಾಗೆ ಚಮಚಗಳು ಉದರ ಸೇರಿದ್ದು ಹೇಗೆ?

spot_img
- Advertisement -
- Advertisement -

ಉತ್ತರಪ್ರದೇಶ: ಅನಾರೋಗ್ಯ ಎಂದು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಹೊಟ್ಟೆಯಲ್ಲಿ ಬರೋಬ್ಬರಿ 63 ಸ್ಟೀಸ್ ಚಮಚಗಳು ಪತ್ತೆಯಾಗಿ ವೈದ್ಯರೇ ಬೆಚ್ಚಿ ಬಿದ್ದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಭೋಪಾಡ ರಸ್ತೆಯ ಇವಾನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಪಾಡ ಗ್ರಾಮದ ನಿವಾಸಿ ವಿಜಯ್ ಮಾದಕ ವ್ಯಸನಿಯಾಗಿದ್ದ. ಇದರಿಂದ ಆತನ ಕುಟುಂಬಸ್ಥರು ಆತನನ್ನು ಮಾದಕ ವ್ಯಸನ ನಿವಾರಣಾ ಕೇಂದ್ರಕ್ಕೆ ದಾಖಲಿಸಿದ್ದರು. ಶಾಮ್ಲಿಯಲ್ಲಿರುವ ಮಾದಕ ವ್ಯಸನ ನಿಗ್ರಹ ಕೇಂದ್ರದಲ್ಲಿ ವಿಜಯ್ ಸುಮಾರು ಒಂದು ತಿಂಗಳ ಕಾಲ ಇದ್ದ.

ಇಲ್ಲಿ ಆತನ ಆರೋಗ್ಯ ಹದಗೆಟ್ಟಿದ್ದರಿಂದ ಕುಟುಂಬದವರು ಆತನ್ನು ಮುಜಾಫರ್‌ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಲ್ಲಿ ತಪಾಸಣೆ ನಡೆಸಿದ ವೈದ್ಯರಿಗೆ ಶಾಕ್​ ಆಗಿತ್ತು. ಆತನ ಹೊಟ್ಟೆಯೊಳಗೆ ಸ್ಟೀಲ್ ಚಮಚಗಳಿರೋದು ಗೊತ್ತಾಗಿದೆ. ಅದು ಒಂದೆರಡಲ್ಲ ಬರೋಬ್ಬರಿ 63 ಸ್ಪೂನ್ ಗಳು. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ವಿಜಯ್ ಹೊಟ್ಟೆಯಲ್ಲಿದ್ದ 63 ಸ್ಟೀಲ್ ಸ್ಪೂನ್​ಗಳನ್ನು ಹೊರ ತೆಗೆದಿದ್ದಾರೆ.

ಆದರೆ, ಆಪರೇಷನ್ ನಂತರವೂ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ವಿಜಯ್ ಹೊಟ್ಟೆಯಲ್ಲಿ ಇಷ್ಟೊಂದು ಚಮಚಗಳು ಹೇಗೆ ಹೋದವು ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಆಹಾರದೊಂದಿಗೆ ಇಷ್ಟೊಂದು ಚಮಚವನ್ನು ತಿನ್ನಲು ಸಾಧ್ಯವಿಲ್ಲ. ಈತನಿಗೆ  ಮಾದಕ ವ್ಯಸನ ಕೇಂದ್ರದ ಸಿಬ್ಬಂದಿ ಬಲವಂತವಾಗಿ ವಿಜಯ್​ಗೆ ಚಮಚ ತಿನ್ನಿಸಿದ್ದಾರೆ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ. ಆದರೆ ಚಮಚ ಹೇಗೆ ಹೊಟ್ಟೆ ಸೇರಿತು ಅನ್ನೋದು ಅನೇಕರಿಗೆ ಬಿಡಿಸಲಾರದ ಕಗ್ಗಂಟಾಗಿದೆ.

- Advertisement -
spot_img

Latest News

error: Content is protected !!