Tuesday, April 30, 2024
Homeತಾಜಾ ಸುದ್ದಿಜೈಲಲ್ಲಿ ಒಂದಿನ ಕಳೆಯ ಬಯಸೋರಿಗೆ ಇಲ್ಲಿದೆ ಸೂಪರ್ ಆಫರ್: 500 ರೂಪಾಯಿಯಲ್ಲಿ ಈಡೇರುತ್ತೆ ನಿಮ್ಮ ಆಸೆ

ಜೈಲಲ್ಲಿ ಒಂದಿನ ಕಳೆಯ ಬಯಸೋರಿಗೆ ಇಲ್ಲಿದೆ ಸೂಪರ್ ಆಫರ್: 500 ರೂಪಾಯಿಯಲ್ಲಿ ಈಡೇರುತ್ತೆ ನಿಮ್ಮ ಆಸೆ

spot_img
- Advertisement -
- Advertisement -

ನ್ಯೂಸ್ ಡೆಸ್ಕ್: ಜೈಲು ಹೇಗಿರುತ್ತೆ, ಅಲ್ಲಿ ಊಟ ಯಾವ ರೀತಿ ಇರುತ್ತೆ, ಕೈದಿಗಳು ಏನ್ಮಾಡ್ತಾರೆ ಹೀಗೆ ಎಲ್ಲವನ್ನು ತಿಳಿದುಕೊಳ್ಳೋ ಕುತೂಹಲದಲ್ಲಿರೋರಿಗೆ ಇಲ್ಲಿದೆ ಸುಂದರ ಅವಕಾಶ.‌‌ ಜಸ್ಟ್ 500 ರೂಪಾಯಿ ನೀಡಿ ನೀವು ನಿಮ್ಮ‌ ಕನಸನ್ನು ಈಡೇರಿಸಿಕೊಳ್ಳಬಹುದು.

ಹೌದು, ಉತ್ತರಾಖಂಡದ  ಜೈಲು ಆಡಳಿತವು ಈ ರೀತಿಯ ಆಫರ್ ನೀಡಿದೆ. ಯೆಸ್, ಒಂದು ರಾತ್ರಿ ಜೈಲಿನಲ್ಲಿ ಕೈದಿಗಳಂತೆ ಇರಲು ಉತ್ತರಾಖಂಡದ ಜೈಲು ಅವಕಾಶ ನೀಡಿದೆ. ಇಂತಹ ವಿಚಿತ್ರ ಆಸೆ ನಿಮಗಿದ್ದರೆ ಈ ಜೈಲಲ್ಲಿ ನೀವು ತಂಗಬಹುದು.ಹಿರಿಯ ಅಧಿಕಾರಿಗಳು ಶಿಫಾರಸ್ಸು ಮಾಡಿದ್ರೆ ಸಾಕು ಜೈಲಿನಲ್ಲಿ ನೀವು ಉಳಿದುಕೊಳ್ಳಬಹುದು. ಅಂದಹಾಗೆ ಈ ಜೈಲಿನಲ್ಲಿ ಕೈದಿಗಳು ಧರಿಸುವಂತಹ ಬಟ್ಟೆ ಹಾಗೂ ನೀಡುವ ಊಟವನ್ನೇ ನೀಡಲಾಗುತ್ತದೆ.

ಆದರೆ ಸದ್ಯ ಈ ಜೈಲಿನಲ್ಲಿ ಇದೀಗ ಕೈದಿಗಳಿಲ್ಲ,ಅದಕ್ಕಾಗಿ ಅತಿಥಿಗಳಿಗೆ ಬಾಡಿಗೆ ಕೊಡಲಾಗುತ್ತಿದೆಯಂತೆ. ಇಲ್ಲಿ ಅತಿಥಿಗಳು ಉಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆ ಇದೆಯಂತೆ. ಅದೇನೆ ಇರಲಿ ಇಲ್ಲಿಗೆ ಬಂದವರಿಗೆ ಥೇಟ್ ಜೈಲಿನ ಅನುಭವ ಸಿಗುವುದಂತು ಗ್ಯಾರೆಂಟಿ. ಅಂದಹಾಗೆ ಈ ಹಲ್ದ್ವಾನಿ ಜೈಲನ್ನು 1903ರಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ಇದೀಗ ಜೈಲಿನಲ್ಲಿ‌ ಸಮಯ ಕಳೆಯಲು ಒಂದಷ್ಟು ಮಂದಿ ಸಿದ್ಧರಾಗಿದ್ದಾರಂತೆ.

- Advertisement -
spot_img

Latest News

error: Content is protected !!