Wednesday, June 3, 2026
Homeಕರಾವಳಿಮಂಗಳೂರಿನಲ್ಲಿ ಲವ್ ಜಿಹಾದಿನ ಮತ್ತೊಂದು ಮುಖ ಬಯಲು: ಇಸ್ಲಾಂಗೆ ಮತಾಂತರವಾಗಿ 22 ವರ್ಷದ ಯುವತಿಯನ್ನು ಮದುವೆಯಾದ...

ಮಂಗಳೂರಿನಲ್ಲಿ ಲವ್ ಜಿಹಾದಿನ ಮತ್ತೊಂದು ಮುಖ ಬಯಲು: ಇಸ್ಲಾಂಗೆ ಮತಾಂತರವಾಗಿ 22 ವರ್ಷದ ಯುವತಿಯನ್ನು ಮದುವೆಯಾದ ಮಂಗಳೂರಿನ 62 ವರ್ಷದ ಉದ್ಯಮಿ

- Advertisement -
- Advertisement -

ಮಂಗಳೂರು :  ಮಂಗಳೂರಿನಲ್ಲಿ ಲವ್ ಜಿಹಾದ್ ನ ಮತ್ತೊಂದು ಮುಖ ಬಯಲಾಗಿದೆ. 62 ವರ್ಷದ ಮಂಗಳೂರಿನ ಉದ್ಯಮಿ ಗಂಗಾಧರ್ ಎಂಬವರು ಇಸ್ಲಾಂಗೆ ಮತಾಂತರವಾಗಿ 22 ವರ್ಷದ ಯುವತಿಯನ್ನು ಮದುವೆಯಾಗಿದ್ದಾರೆ ಎಂಬುವುದಾಗಿ ಗಂಗಾಧರ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.

ನನ್ನ ಪತಿ ಜನವರಿ ತಿಂಗಳ ಕೊನೆಯ ವಾರದಲ್ಲಿ ಮನೆಗೆ ಬಂದು ಹೋದವರು ಆ ಬಳಿಕ ಮನೆಗೆ ವಾಪಾಸ್ ಬಂದಿಲ್ಲ. ಫೆಬ್ರವರಿ 8 ರವರಗೆ ಅವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಆ ಬಳಿಕ ನಾನು ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ. ಅವರು ಬ್ಯುಸಿನೆನ್ ಹಿನ್ನೆಲೆ ಹೊರಗಡೆ ಜಾಸ್ತಿ ಹೋಗುತ್ತಿರುತ್ತಾರೆ. ಹಾಗಾಗಿ  ಬ್ಯುಸಿ ಇದ್ದರಿಂದ ಕರೆ ಸ್ವೀಕರಿಸುತ್ತಿಲ್ಲ ಅಂದುಕೊಂಡಿದ್ದೆ. ಆದ್ರೆ ಮಾರ್ಚ್ 15 ರಂದು ನನ್ನ ಸ್ನೇಹಿತರೊಬ್ಬರು ನನ್ನ ಗಂಡನಿಗೆ ಮುಸ್ಲೀಂ ಯುವತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿದ್ದಾರೆ ಅಂತಾ ತಿಳಿಸಿದ್ರು. ಫೋಟೋ ಕೂಡ ತೋರಿಸಿದ್ರು. ನನ್ನ ಗಂಡನನ್ನು ಯಾರೋ ಅಪಹರಣ ಮಾಡಿ ಈ ರೀತಿ ಮಾಡಿಸಿದ್ದಾರೆ ಅಂತಾ ಮಹಿಳೆ ದೂರು ನೀಡಿದ್ದಾರೆ. ಅಲ್ಲದೇ ಕೂಡಲೇ ನನ್ನ ಗಂಡನನ್ನು ಪತ್ತೆ ಮಾಡಿಕೊಡ್ಬೇಕು ಅಂದಿದ್ದಾರೆ.

ಇನ್ನು  ಮುಸ್ಲಿಂ ಹೆಣ್ಣುಮಕ್ಕಳನ್ನು ಈ ರೀತಿ ಛೂ ಬಿಟ್ಟು ಲವ್ ಜಿಹಾದ್  ಮಾಡಲಾಗುತ್ತಿದೆ. ಈ ಬಗ್ಗೆ  ವಿಶೇಷ  ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್ ನ ಶರಣ್ ಪಂಪ್ ವೆಲ್ ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!