Monday, June 8, 2026
Homeತಾಜಾ ಸುದ್ದಿಒಂದೇ ಕುಟುಂಬದ ಆರು ಮಂದಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ....

ಒಂದೇ ಕುಟುಂಬದ ಆರು ಮಂದಿ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆ….

- Advertisement -
- Advertisement -

ಒಡಿಶಾ: ಇಲ್ಲಿನ ಬೋಲಂಗೀರ್ ಜಿಲ್ಲೆಯ ಪಟ್ನಾಘರ್​ ಪೊಲೀಸ್ ಠಾಣಾ ವ್ಯಾಪ್ತಿಯ ಸಂರಪಾಡ ಎಂಬ ಗ್ರಾಮದಲ್ಲಿ ಒಂದೇ ಕುಟುಂಬದ ಆರು ಮಂದಿಯ ಮೃತದೇಹಗಳು ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿವೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೃತರನ್ನು ಬುಲು ಜಾನಿ (50), ಅವರ ಪತ್ನಿ ಜ್ಯೋತಿ (48), ಇಬ್ಬರು ಪುತ್ರಿಯರಾದ ಸರಿತಾ ಮತ್ತು ಶ್ರೇಯಾ ಹಾಗೂ ಪುತ್ರರಾದ ಭೀಷ್ಮ ಮತ್ತು ಸಂಜೀವ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ನಿನ್ನೆ ಮನೆಯ ಬಾಗಿಲು ಮುಚ್ಚಿರುವುದನ್ನು ಗಮನಿಸಿದ ನೆರೆ ಮನೆಯವರು ಕಿಟಕಿಯ ಮೂಲಕ ನೋಡಿದಾಗ ಪ್ರಕರಣ ಬೆಳಕಿಗೆ. ಪೊಲೀಸರು ಮೃತಪಟ್ಟಿರುವುದನ್ನು ಖಚಿತಪಡಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಿಗೂಢ ರೀತಿಯಲ್ಲಿ ಮೃತದೇಹಗಳನ್ನು ಪತ್ತೆಯಾಗಿದ್ದರಿಂದ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

- Advertisement -

Latest News

error: Content is protected !!