Thursday, June 4, 2026
Homeತಾಜಾ ಸುದ್ದಿಒಂದೇ ಕುಟುಂಬದ ಆರು ಮಂದಿಯ ಬರ್ಬರ ಹತ್ಯೆ

ಒಂದೇ ಕುಟುಂಬದ ಆರು ಮಂದಿಯ ಬರ್ಬರ ಹತ್ಯೆ

- Advertisement -
- Advertisement -

ವಿಶಾಖಪಟ್ಟಣಂ : ಒಂದೇ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಜುತ್ತಾಡದಲ್ಲಿ ನಡೆದಿದೆ.

ಜುತ್ತಾಡದಲ್ಲಿರುವ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ಒಂದೇ ಕುಟುಂಬದ ಆರು ಮಂದಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮೃತರನ್ನು ಉಷಾರಾಣಿ, ರಮಾದೇವಿ, ಅರುಣ, ರಮಣ ಹಾಗೂ ಮಕ್ಕಳಾದ ಉದಯ, ಊರ್ವಿ ಎಂದು ಗುರುತಿಸಲಾಗಿದೆ.

ಇನ್ನು ಇವರನ್ನು ಅಪ್ಪಲರಾಜು ಎಂಬುವನು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಸದ್ಯಕ್ಕೆ ಆತನಕ್ಕೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

- Advertisement -

Latest News

error: Content is protected !!