ಬೆಂಗಳೂರು : ರಾಜ್ಯದಲ್ಲಿ ಇಂದು ಕೋವಿಡ್ ದಾಖಲೆ ಬರೆದಿದೆ. ಇಂದು ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 5536 ಪ್ರಕರಣಗಳು ವರದಿಯಾಗಿವೆ. ಹಾಗೇ 102 ಮಂದಿಯನ್ನು ಕೊರೊನಾ ಇಂದು ತನಗೆ ಬಲಿಯಾಗಿಸಿಕೊಂಡಿದೆ.
ಇಂದು ವರದಿಯಾದ ಪ್ರಕರಣಗಳ ಸೇರ್ಪಡೆಯೊಂದಿಗೆ ರಾಜ್ಯದಲ್ಲಿ ಇದುವರೆಗೂ ಕಂಡು ಬಂದಿರುವ ಪ್ರಕರಣಗಳ ಸಂಖ್ಯೆ 1,07,001ಕ್ಕೆ ಏರಿಕೆಯಾಗಿದೆ. ಹಾಗೇ ಇದುವರೆಗೂ ಸಾವನ್ನಪ್ಪಿದ್ದರ ಸಂಖ್ಯೆ 2055ಕ್ಕೇರಿದೆ. ಸದ್ಯ ರಾಜ್ಯದಲ್ಲಿ 64434 ಕೊರೊನಾ ಸಕ್ರೀಯ ಪ್ರಕರಣಗಳಿವೆ. ಇದುವರೆಗೂ 40,504 ಮಂದಿ ಗುಣಮುಖರಾಗಿದ್ದಾರೆ. ಇನ್ನು ಇಂದು ಒಂದೇ ದಿನ 2819 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಇಂದು ಒಂದೇ ದಿನದಲ್ಲಿ 1898 ಹೊಸ ಪ್ರಕರಣಗಳು ಪತ್ತೆಯಾಗಿವೆ. 40 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 48,821ಕ್ಕೆ ಏರಿಕೆಯಾಗಿದ್ದು, ಸದ್ಯ 35,102 ಸಕ್ರೀಯ ಪ್ರಕರಣಗಳಿವೆ. ಹಾಗೇ 12,761 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಒಂದೇ ದಿನ 572 ಮಂದಿ ಹಾಸ್ಪಿಟಲ್ ಗಳಿಂದ ಬಿಡುಗಡೆಯಾಗಿದ್ದಾರೆ. ರಾಜಧಾನಿಯಲ್ಲಿ ಇದುವರೆಗೂ ಕೊರೊನಾಗೆ 957 ಮಂದಿ ಬಲಿಯಾಗಿದ್ದಾರೆ.