Saturday, April 27, 2024
Homeತಾಜಾ ಸುದ್ದಿಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಿಸುವ ಜೀವರಕ್ಷಕರಿಗೆ ಸರ್ಕಾರದಿಂದ ಸಿಗಲಿದೆ 5000 ರೂ. ನಗದು ಪ್ರಶಸ್ತಿ

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಿಸುವ ಜೀವರಕ್ಷಕರಿಗೆ ಸರ್ಕಾರದಿಂದ ಸಿಗಲಿದೆ 5000 ರೂ. ನಗದು ಪ್ರಶಸ್ತಿ

spot_img
- Advertisement -
- Advertisement -

ನವದೆಹಲಿ: ಅಪಘಾತಕ್ಕೊಳಗಾದಂತಹ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿ ಜೀವ ರಕ್ಷಿಸಿದ ವ್ಯಕ್ತಿಗಳಿಗೆ ಪ್ರತಿ ಘಟನೆಗೆ ಜೀವರಕ್ಷಕ ಎಂಬುದಾಗಿ ರೂ.5,000 ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡುವುದಾಗಿ ಕೇಂದ್ರ ಸಾರಿಗೆ & ಹೆದ್ದಾರಿಗಳ ಸಚಿವಾಲಯ ಘೋಷಿಸಿದೆ.


ದಿನಾಂಕ 15-10-2021ರಿಂದ 31-03-2026ರವರೆಗೆ ಜೀವರಕ್ಷಕರಿಗೆ ನಗದು ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ.
ರಸ್ತೆ ಅಪಘಾತಕ್ಕೊಳಗಾದ ವ್ಯಕ್ತಿಗಳನ್ನು ಸುವರ್ಣ ಅವಧಿಯೊಳಗೆ ಸಹಾಯ ಮಾಡಿ, ಆಸ್ಪತ್ರೆಗೆ ಸಾಗಿಸುವಲ್ಲಿ ಪ್ರೇರೇಪಿಸುವುದು, ಈ ಯೋಜನೆಯ ಉದ್ದೇಶವಾಗಿರುತ್ತದೆ ಎಂದು ಸಚಿವಾಲಯ ತಿಳಿಸಿದೆ‌.

ಪ್ರತಿ ಘಟನೆಗೆ ಜೀವರಕ್ಷಕನಿಗೆ ರೂ.5,000 ನಗದು ಬಹುಮಾನ ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ಈ ಕುರಿತು ಜಿಲ್ಲಾ ಮೌಲ್ಯಮಾಪನ ಸಮಿತಿಯನ್ನು ಮತ್ತು ರಾಜ್ಯ ಮಟ್ಟದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾರ್ಗಸೂಚಿಯನ್ವಯ ರಾಜ್ಯದಲ್ಲಿ ಸಮಿತಿ ರಚನೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.

ಜೀವರಕ್ಷಕರನ್ನು ಆಯ್ಕೆ ಮಾಡಲು ರಾಜ್ಯಮಟ್ಟದಲ್ಲಿ ಪರಿಶೀಲನಾ ಸಮಿತಿ ಮತ್ತು ಜಿಲ್ಲಾಮಟ್ಟಗಳಲ್ಲಿ ಮೌಲ್ಯಮಾಪನ ಸಮಿತಿ ರಚಿಸಲಾಗಿದೆ.

ಒಳಾಡಳಿತ ಇಲಾಖೆ ಎಸಿಎಸ್ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಪರಿಶೀಲನಾ ಸಮಿತಿ ರಚನೆ ಮಾಡಲಾಗಿದ್ದು, ಡಿಸಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಮೌಲ್ಯಮಾಪನ ಸಮಿತಿ ರಚನೆ ಮಾಡಲಾಗಿದೆ.

ಯೋಜನೆಯನ್ವಯ ಜೀವರಕ್ಷಕರಿಗೆ 5000 ರೂ. ನಗದು ಪ್ರಶಸ್ತಿ ಮತ್ತು ಪ್ರಮಾಣಪತ್ರ ನೀಡಲಿದ್ದು,
2026ರ ಮಾರ್ಚ್ 31 ರವರೆಗೂ ಯೋಜನೆ ಅನುಷ್ಠಾನದಲ್ಲಿರಲಿದೆ.

- Advertisement -
spot_img

Latest News

error: Content is protected !!