- Advertisement -
- Advertisement -
ಉತ್ತರಪ್ರದೇಶ; ಟೀ ಕುಡಿದು ಐವರು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಇಬ್ಬರು ಮಕ್ಕಳು ಮತ್ತು ಅವರ ತಂದೆ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ.
ಶಿವಾನಂದನ್(35),ಅವರ ಮಕ್ಕಳಾದ ಶಿವಂಗ್(6) ಮತ್ತು ದಿವ್ಯಾಂಶ್ (5),ಅವರ ಮಾವ ರವೀಂದ್ರ ಸಿಂಗ್(55), ಮತ್ತು ನೆರೆಹೊರೆಯವರಾದ ಸೊಬ್ರಾನ್(42) ನಾಗ್ಲಾ ಕನ್ಹೈ ಗ್ರಾಮದ ತಮ್ಮ ಮನೆಯಲ್ಲಿ ಮಾಡಿದ ಚಹಾವನ್ನು ಸೇವಿಸಿ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸೊಬ್ರಾನ್ ಮತ್ತು ಶಿವಾನಂದನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಮೊದಲಿಗೆ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ. ಶಿವಾನಂದನ್ ಅವರ ಪತ್ನಿ ರಾಮಮೂರ್ತಿ ಅವರು ಭತ್ತಕ್ಕೆ ಸಿಂಪಡಿಸುವ ಔಷಧವನ್ನು ಚಹಾ ಎಲೆ ಎಂದು ತಪ್ಪಾಗಿ ಭಾವಿಸಿ ಟೀಗೆ ಹಾಕಿದ್ದು ಅನಾಹುತಕ್ಕೆ ಕಾರಣ ಎಂದು ವೈದ್ಯರು ಹೇಳಿದ್ದಾರೆ.
- Advertisement -