Thursday, June 4, 2026
Homeತಾಜಾ ಸುದ್ದಿಚಿತ್ರದುರ್ಗದ ಮುರುಘಾಮಠದ ರಾಜಾಂಗಣದಲ್ಲಿದ್ದ 47 ಫೋಟೋಗಳು ದಿಢೀರ್ ನಾಪತ್ತೆ; ದೂರು ದಾಖಲು

ಚಿತ್ರದುರ್ಗದ ಮುರುಘಾಮಠದ ರಾಜಾಂಗಣದಲ್ಲಿದ್ದ 47 ಫೋಟೋಗಳು ದಿಢೀರ್ ನಾಪತ್ತೆ; ದೂರು ದಾಖಲು

- Advertisement -
- Advertisement -

ಚಿತ್ರದುರ್ಗ : ಮುರುಘಾಮಠದ ರಾಜಾಂಗಣದಲ್ಲಿದ್ದ 47 ಫೋಟೋಗಳು ದಿಢೀರ್ ನಾಪತ್ತೆಯಾಗಿದ್ದು, ಈ ಸಂಬಂಧ ಚಿತ್ರದುರ್ಗ ಗ್ರಾಮೀಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುರುಘಾಮಠದ ಪೀಠಾಧಿಪತಿ ಅವರೊಂದಿಗೆ ಮುಖ್ಯಮಂತ್ರಿಗಳು ಸೇರಿದಂತೆ ಹಲವು ಗಣ್ಯರು ಇರುವ ಛಾಯಾಚಿತ್ರಗಳನ್ನು ಮಠದ ರಾಜಾಂಗಣದೊಳಗೆ ಹಾಕಲಾಗಿತ್ತು. ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ಗುರುವಾರ ಶೂನ್ಯ ಪೀಠಾರೋಹಣ ಹಾಗೂ ಬಸವಣ್ಣ, ಅಲ್ಲಮಪ್ರಭು ದೇವರ ಭಾವಚಿತ್ರಗಳ ಮೆರವಣಿಗೆ ವೇಳೆ ಫೋಟೋಗಳು ಇಲ್ಲದಿರುವುದು ಬೆಳಕಿಗೆ ಬಂದಿವೆ.

ಮಠದಲ್ಲಿನ ಫೋಟೋಗಳ ಕಳವು ಪ್ರಕರಣ ಕುರಿತಂತೆ ಎಸ್ ಜೆಎಂ ಕಾರ್ಯದರ್ಶಿ ಎಸ್.ಬಿ.ವಸ್ತ್ರಮಠ, ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ ಪಿ ಪರಶುರಾಮ್ ತಿಳಿಸಿದ್ದಾರೆ.

- Advertisement -

Latest News

error: Content is protected !!