Friday, June 27, 2025
Homeತಾಜಾ ಸುದ್ದಿ4 ವರ್ಷದ ಈ ಪುಟ್ಟ ಪೋರನ ಚೆಂಡೆ ವಾದನಕ್ಕೆ ಮನಸೋತ ಕಲಾಸಕ್ತರು

4 ವರ್ಷದ ಈ ಪುಟ್ಟ ಪೋರನ ಚೆಂಡೆ ವಾದನಕ್ಕೆ ಮನಸೋತ ಕಲಾಸಕ್ತರು

spot_img
- Advertisement -
- Advertisement -

ಸುಬ್ರಮಣ್ಯ : ಮಕ್ಕಳ ಆಸಕ್ತಿ, ಸಂಸ್ಕಾರ, ವರ್ತನೆ ಇದೆಲ್ಲದರ ಮೇಲೆ ಮನೆಯವರ ಪ್ರಭಾವ ಸಾಕಷ್ಟಿರುತ್ತದೆ. ಅದರಲ್ಲೂ ಹೆತ್ತವರ ಆಸಕ್ತಿಗಳು, ಅಭ್ಯಾಸಗಳು ಪುಟ್ಟ ಮಕ್ಕಳ ಮೇಲೆ ಭಾರೀ ಪ್ರಭಾವ ಬೀರುತ್ತದೆ. ಇದಕ್ಕೆ ಸಾಕ್ಷಿ ಹೇಳುವಂತಿದೆ ಈ ವಿಡಿಯೋ. ಭಾಗವತರಾದ ಭವ್ಯಶ್ರೀ ಕುಲ್ಕುಂದ ಹಾಗೂ ಪತ್ರಕರ್ತ ಹರೀಶ್ ಕುಲ್ಕುಂದ ಅವರ 4 ವರ್ಷದ ಕಂದ ಈ ಅಗಸ್ತ್ಯ. ಅಮ್ಮಾನ ಭಾಗವತಿಕೆ ನೋಡಿ ನೋಡಿ ಯಕ್ಷಗಾನದ ಆಸಕ್ತಿ ಈತನ ರಕ್ತದಲ್ಲೇ ಬಂದಿದೆ.

ಅಮ್ಮನ ಭಾಗವತಿಕೆಗೆ ಮನೆಯಲ್ಲಿ ಈತ ಚೆಂಡೆ ನುಡಿಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಲ್ಕು ವರ್ಷದ ಈ ಪುಟಾಣಿಯ ಕಲಾಸಕ್ತಿಗೆ ಇದೀಗ ಯಕ್ಷಗಾನ ದಿಗ್ಗಜರೇ ಭೇಷ್ ಎನ್ನುತಿದ್ದಾರೆ. ಅನುಭವಿ ಕಲಾವಿದರನ್ನು ನಾಚಿಸುವಂತಿದೆ ಈ ಪುಟ್ಟ ಕಂದ ಚೆಂಡೆ ವಾದನ. ಭವಿಷ್ಯದಲ್ಲಿ ಈತ ದೊಡ್ಡ ಕಲಾವಿದನಾಗುವ ಎಲ್ಲಾ ಲಕ್ಷಣಗಳು ಈತನಲ್ಲಿ ಗೋಚರಿಸುತ್ತಿವೆ. ಈತನ ಭವಿಷ್ಯ ಉಜ್ವಲವಾಗಿರಲಿ.

ಖ್ಯಾತ ಭಾಗವತರಾದ ಭವ್ಯಶ್ರೀ ಹರೀಶ್ ಕುಲ್ಕುಂದ ಇವರ ಸುಕುಮಾರ. ಅಗಸ್ತ್ಯ ಈ ಪುಟಾಣಿಯ ಮುಂದಿನ ‌ಭವಿಷ್ಯ ಉಜ್ವಲವಾಗಲಿ

Posted by Satish Kumar Kulal on Wednesday, 22 July 2020

- Advertisement -
spot_img

Latest News

error: Content is protected !!