Friday, June 5, 2026
Homeಅಪರಾಧಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಪೋಲಿಸರ ದಾಳಿ; ಮೂವರು ಆರೋಪಿಗಳು ವಶಕ್ಕೆ

ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಪೋಲಿಸರ ದಾಳಿ; ಮೂವರು ಆರೋಪಿಗಳು ವಶಕ್ಕೆ

- Advertisement -
- Advertisement -

ವಿಟ್ಲ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ನಿರತರಾಗಿದ್ದ ಸ್ಥಳಕ್ಕೆ ದಾಳಿ ನಡೆಸಿದ ವಿಟ್ಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಸ್ವತ್ತುಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಕೊಲ್ನಾಡು ಗ್ರಾಮದ ಕುದ್ರಿಯ ಎಂಬಲ್ಲಿ ನಡೆದಿದೆ.


ಸ್ಥಳೀಯ ನಿವಾಸಿಗಳಾದ ಕರುಣಾಕರ, ಶರತ್‌ಕುಮಾರ ಮತ್ತು ಅವಿನಾಶ್ ಬಂಧಿತ ಆರೋಪಿಗಳು.


ಕೊಲ್ನಾಡು ಗ್ರಾಮದ ಕುದ್ರಿಯಾ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಐಪಿಎಲ್ ಕ್ರಿಕೆಟ್ ಪಂದ್ಯಾಟಕ್ಕೆ ಬೆಟ್ಟಿಂಗ್ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಇನ್ ಸ್ಪೆಕ್ಟರ್ ನಾಗರಾಜ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಎಸೈ ಸಂದೀಪ್ ಕುಮಾರ್ ಮತ್ತು ತಂಡ ದಾಳಿ ನಡೆಸಿದೆ.


ಈ ಸಂದರ್ಭ ಮೂವರು ಆರೋಪಿಗಳು ಕೈಯಲ್ಲಿ ಮೊಬೈಲ್ ಫೋನುಗಳನ್ನು ಹಿಡಿದುಕೊಂಡು ಅದರಲ್ಲಿ ಮಾತನಾಡಿಕೊಂಡು ಲ್ಯಾಪ್‌ಟ್ಯಾಪ್ ಮುಖಾಂತರ ಕ್ರಿಕೆಟ್ ಪಂದ್ಯಾಟವನ್ನು ನೋಡುತ್ತಿದ್ದರು. ಅವರನ್ನು ಸ್ಥಳದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

- Advertisement -

Latest News

error: Content is protected !!