Monday, May 6, 2024
Homeಕ್ರೀಡೆಮತ್ತೆ ಕುಸಿದ ಆಸೀಸ್ ಬ್ಯಾಟಿಂಗ್: ಭಾರತದ ಹಿಡಿತದಲ್ಲಿ ದ್ವಿತೀಯ ಟೆಸ್ಟ್ ಪಂದ್ಯ

ಮತ್ತೆ ಕುಸಿದ ಆಸೀಸ್ ಬ್ಯಾಟಿಂಗ್: ಭಾರತದ ಹಿಡಿತದಲ್ಲಿ ದ್ವಿತೀಯ ಟೆಸ್ಟ್ ಪಂದ್ಯ

spot_img
- Advertisement -
- Advertisement -

ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನವೂ ಭಾರತದ ಬಿಗು ಬೌಲಿಂಗ್ ದಾಳಿಗೆ ಆಸೀಸ್ ಬ್ಯಾಟಿಂಗ್ ಕ್ರಮಾಂಕ ಮತ್ತೊಮ್ಮೆ ಕುಸಿತ ಕಂಡಿದೆ.

ಮೊದಲ ಇನಿಂಗ್ಸ್ ನಲ್ಲಿ 326 ರನ್ ಗಳಿಗೆ ಆಲೌಟ್ ಆದ ಟೀಂ ಇಂಡಿಯಾ 131 ರನ್ ಗಳ ಮಹತ್ವದ ಮುನ್ನಡೆ ಗಳಿಸಿತು. ಭಾರತದ ಪರ ನಿನ್ನೆ ಅಜೇಯರಾಗುಳಿದಿದ್ದ ನಾಯಕ ಅಜಿಂಕ್ಯಾ ರೆಹಾನೆ 112 ರನ್ ಗಳಿಸಿ ಔಟಾದರೆ ರವೀಂದ್ರ ಜಡೇಜಾ 57 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ರವಿಚಂದ್ರನ್ ಅಶ್ವಿನ್ 14 ರನ್ ಗಳ ಕಾಣಿಕೆ ನೀಡಿದರು.

ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಮೂರನೇ ದಿನದಾಟದ ಮುಕ್ತಾಯಕ್ಕೆ 6 ವಿಕೆಟ್ ನಷ್ಟಕ್ಕೆ 133 ರನ್ ಗಳಿಸಿದೆ. ಸದ್ಯ ಆಸೀಸ್ ತಂಡ ಕೇವಲ 2 ರನ್ ಮುನ್ನಡೆಯಲ್ಲಿದೆ. ಆರಂಭದಲ್ಲೇ ಜೋ ಬರ್ನ್ಸ್ ಕೇವಲ 4 ರನ್ ಗೆ ಔಟಾದರು. ವೇಡ್ (40 ರನ್), ಲಬುಶೇನ್ (28 ರನ್) ಗಳಿಸಿ ಸ್ವಲ್ಪ ಆಧರಿಸಿದರು. ಆದರೆ ನಂತರ ಸ್ಮಿತ್, ಹೆಡ್, ಪೇನ್ ರೂಪದಲ್ಲಿ ಸತತ ವಿಕೆಟ್ ಕಳೆದುಕೊಂಡಿತು.

ಸದ್ಯ ಗ್ರೀನ್ (17 ರನ್) ಮತ್ತು ಕಮಿನ್ಸ್ ( 15 ರನ್) ಆಡುತ್ತಿದ್ದಾರೆ. ಭಾರತದ ಪರ ಜಡೇಜಾ ಎರಡು ವಿಕೆಟ್ ಪಡೆದರೆ, ಉಳಿದೆಲ್ಲಾ ಬೌಲರ್ ಗಳು ತಲಾ ಒಂದು ವಿಕೆಟ್ ಕಬಳಿಸಿದರು. ನಾಲ್ಕನೇ ದಿನದ ಆರಂಭದಲ್ಲಿ ಆಸೀಸ್ ನ್ನು ಆಲ್ ಔಟ್ ಮಾಡಿದರೆ ಭಾರತಕ್ಕೆ ಸುಲಭ ಗೆಲುವು ನಿಶ್ಚಿತ.

- Advertisement -
spot_img

Latest News

error: Content is protected !!