Saturday, June 28, 2025
Homeತಾಜಾ ಸುದ್ದಿನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ : 28 ಲೋಕೋ ಪೈಲೆಟ್ ಗಳಿಗೆ ಕೊರೊನಾ ಪಾಸಿಟಿವ್

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ : 28 ಲೋಕೋ ಪೈಲೆಟ್ ಗಳಿಗೆ ಕೊರೊನಾ ಪಾಸಿಟಿವ್

spot_img
- Advertisement -
- Advertisement -

ಬೆಂಗಳೂರು : ಸೆಪ್ಟೆಂಬರ್ 7 ರಂದಷ್ಟೇ ನಮ್ಮ ಮೆಟ್ರೋ ತನ್ನ ಸಂಚಾರ ಆರಂಭಿಸಿತ್ತು. ಹಾಗಾಗಿ ಮೆಟ್ರೋ ಇಲ್ಲದೇ ಪರದಾಡುತ್ತಿದ್ದ ಪ್ರಯಾಣಿಕರು ಫುಲ್ ಖುಷಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.

ಯೆಸ್.. ಮ್ಮ ಮೆಟ್ರೋದ 28 ಮಂದಿ ಲೋಕೋ ಪೈಲಟ್‌ಗಳು ಹಾಗೂ ಸ್ಟೇಷನ್‌ ಕಂಟ್ರೋಲರ್‌ಗಳಿಗೆ ಕೊರೊನಾ ಸೋಂಕು ತಗುಲಿದೆ. ಕೊರೊನಾ ಲಾಕ್‌ಡೌನ್ ಸಡಿಲಗೊಂಡ ಬಳಿಕ ಇದೀಗ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳ ಮಾಡುವುದೇ ದೊಡ್ಡ ಸವಾಲಿನ ಕೆಲಸವಾಗಿರುವ ಈ ಹೊತ್ತಿನಲ್ಲಿ, ಲೋಕೋ ಪೈಲಟ್‌ಗಳಿಗೆ ಸೋಂಕು ತಗುಲಿರುವುದು ಪ್ರಯಾಣಿಕರನ್ನು ಮತ್ತಷ್ಟು ಆತಂಕ್ಕೀಡು ಮಾಡಿದೆ.

ಸಪ್ಟಂಬ್ರ 7 ರಂದು ಮೆಟ್ರೋ ಸೇವೆ ಮರು ಆರಂಭ ಮಾಡಿದಾಗ ಎಲ್ಲಾ ಪೈಲಟ್‌ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಯಾರೊಬ್ಬರಿಗೂ ಸೋಂಕಿನ ಲಕ್ಷಣಗಳಿರಲಿಲ್ಲ. ಆದರೆ ಈಗ ಸೋಂಕು ಕಾಣಿಸಿಕೊಂಡಿದೆ. ಹಾಗಾಗಿ ಎಲ್ಲರನ್ನೂ ಹೋಮ್ ಕ್ವಾರಂಟೈನ್ ಮಾಡಲಾಗಿದೆ.ಇನ್ನೂ ಕೆಲವರು ಆಸ್ಪತ್ರೆಯಲ್ಲಿದ್ದಾರೆ ಒಟ್ಟಿನಲ್ಲಿ ವೈದ್ಯರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.ಪ್ರತಿ ನಿತ್ಯವೂ ಲೋಕೋಪೈಲಟ್‌ಗಳ ಪರೀಕ್ಷೆ ಮಾಡಿಸುತ್ತಿದ್ದು, ಆರು ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸೋಂಕು ತಗುಲಿದೆ.

ಬೆಳಗ್ಗೆ 7 ರಿಂದ ಸಂಜೆ 9 ಗಂಟೆಯವರೆಗೆ ನಮ್ಮ ಮೆಟ್ರೋ ಸಂಚರಿಸಲಿದ್ದು, 450 ಲೋಕೋ ಪೈಲಟ್‌ಗಳು ಹಾಗೂ ಸ್ಟೇಷನ್ ಕಂಟ್ರೋಲರ್‌ಗಳು ಕೆಲಸ ನಿರ್ವಹಿಸುತ್ತಾರೆ. ಕೆಲಸಕ್ಕೆ ಬರುವ ಮುನ್ನ ಥರ್ಮಲ್ ಸ್ಕ್ರೀನಿಂಗ್ ಹಾಗೂ ಟೆಂಪರೇಚರ್ ಚೆಕ್ ಮಾಡಲಾಗುತ್ತಿದೆ.

- Advertisement -
spot_img

Latest News

error: Content is protected !!