ಸುಳ್ಯ: ಸುಳ್ಯ ತಾಲೂಕಿನಲ್ಲಿ ಪ್ರಥಮ ದಿನದ ಪರೀಕ್ಷೆಗೆ 23 ಮಂದಿ ಗೈರು ಹಾಜರಾಗಿದ್ದಾರೆ.

1901 ಹೊಸ ಮತ್ತು ಮರು ಮರೀಕ್ಷೆಗೆ 3 ಸೇರಿ ಒಟ್ಟು 1904 ಮಂದಿ ಪರೀಕ್ಷೆಗೆ ನೋಂದಾವಣೆ ಮಾಡಿ ಕೊಂಡಿದ್ದರು. ಅದರಲ್ಲಿ 23 ಮಂದಿ ಗೈರು ಹಾಜರಾಗಿದ್ದಾರೆ. 1881 ಮಂದಿ ಪ್ರಥಮ ದಿನ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್ ಮಾಹಿತಿ ನೀಡಿದ್ದಾರೆ. ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಎಸ್.ಪಿ. ಮಹದೇವ್, ಕೇಂದ್ರದಲ್ಲಿ 437 ಮಂದಿ ನೋಂದಣಿ ಮಾಡಿಕೊಂಡು 2 ಗೈರು ಹಾಜರಾಗಿ 435 ಮಂದಿ ಹಾಜರಾಗಿದ್ದಾರೆ. ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 237 ರಲ್ಲಿ 2 ಗೈರಾಗಿ 235 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಸೈಂಟ್ ಜೋಸೆಫ್ ಶಾಲೆಯಲ್ಲಿ 287ರಲ್ಲಿ 11 ಗೈರು ಹಾಜರಾಗಿ 276 ಮಂದಿ ಪರೀಕ್ಷೆ ಬರೆದರು.
ಅರಂತೋಡು ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ 218ರಲ್ಲಿ 1 ಗೈರಾಗಿ 217, ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ 330 ರಲ್ಲಿ 2 ಗೈರಾಗಿ 328, ಸುಬ್ರಹ್ಮಣ್ಯ ಎಸ್ಎಎಸ್‌ಪಿಯು ಕಾಲೇಜಿನಲ್ಲಿ 402 ರಲ್ಲಿ 5 ಗೈರು ಹಾಜರಾಗಿ 397 ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಗಳು ಸುಸೂತ್ರವಾಗಿ ನಡೆಯುತು. ಯಾವುದೇ ಗೊಂದಲಗಳು, ಸಮಸ್ಯೆಗಳು ಇರಲಿಲ್ಲ ಮತ್ತು ವಿದ್ಯಾರ್ಥಿಗಳು ಲವಲವಿಕೆಯಿಂದ ಪರೀಕ್ಷೆ ಬರೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್ ಹೇಳಿದರು.