Friday, June 5, 2026
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿಂದು 200ರ ಗಡಿ ದಾಟಿದ ಕೊರೊನಾ ಕೇಸುಗಳು, 10 ಮಂದಿ ಪಾಲಿಗೆ ಯಮನಾದ ಕೋವಿಡ್, ಉಡುಪಿಯಲ್ಲೂ...

ದಕ್ಷಿಣಕನ್ನಡದಲ್ಲಿಂದು 200ರ ಗಡಿ ದಾಟಿದ ಕೊರೊನಾ ಕೇಸುಗಳು, 10 ಮಂದಿ ಪಾಲಿಗೆ ಯಮನಾದ ಕೋವಿಡ್, ಉಡುಪಿಯಲ್ಲೂ ಜೋರಾಗಿದೆ ಮಹಾಮಾರಿಯ ಆರ್ಭಟ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡದಲ್ಲಿಂದು ಕೊರೊನಾ ಪ್ರಕರಣಗಳ ಸಂಖ್ಯೆ 200ರ ಗಡಿ ದಾಟಿದೆ. ಬರೋಬ್ಬರಿ 204 ಪ್ರಕರಣಗಳು ಇಂದು ಪತ್ತೆಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5,708ಕ್ಕೆ ಏರಿಕೆಯಾಗಿದೆ. ಇನ್ನು ಜಿಲ್ಲೆಯಲ್ಲಿ 10 ಮಂದಿ ಇವತ್ತು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,940 ಸಕ್ರೀಯ ಪ್ರಕರಣಗಳಿದ್ದು, 2,626 ಮಂದಿ ಗುಣಮುಖರಾಗಿದ್ದಾರೆ. ಇನ್ನು ಇಂದು 70 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 140 ಮಂದಿಗೆ ಕೋವಿಡ್ ಗೆ ಬಲಿಯಾಗಿದ್ದಾರೆ.

ಇನ್ನು ಉಡುಪಿಯಲ್ಲಿ ಇಂದು 213 ಹೊಸ ಕೇಸುಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4,355ಕ್ಕೆ ಏರಿಕೆಯಾಗಿದೆ.ಸದ್ಯ 1898 ಸಕ್ರೀಯ ಪ್ರಕರಣಗಳಿದ್ದು, 2,428 ಮಂದ ಗುಣಮುಖರಾಗಿದ್ದಾರೆ. ಇಂದು 54 ಜನ ಡಿಸ್ಚಾರ್ಜ್ ಆಗಿದ್ದಾರೆ. 29 ಮಂದಿ ಇದುವೆರೆಗೂ ಜಿಲ್ಲೆಯಲ್ಲಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!