- Advertisement -
- Advertisement -
ಕೊರೋನಾ ಸೋಂಕು ತಡೆಗೆ ಲಾಕ್ ಡೌನ್ ಘೋಷಿಸಿದ್ದು ಇದೇ ವೇಳೆಯಲ್ಲೇ ಮಂಡ್ಯದಲ್ಲಿ ಎರಡು ಮದುವೆ ನೆರವೇರಿದೆ. ಮಂಡ್ಯ ತಾಲೂಕಿನ ದೊಡ್ಡಗರುಡನಹಳ್ಳಿಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಭ ಮತ್ತು ನಂದೀಶ್ ಮದುವೆ ಸರಳವಾಗಿ ಕುಟುಂಬದವರ ಸಮ್ಮುಖದಲ್ಲಿ ನೆರವೇರಿದೆ. ಶ್ರೀರಂಗಪಟ್ಟಣದ ಕೆ.ಆರ್.ಎಸ್. ಯಲ್ಲಮ್ಮ ದೇವಾಲಯದಲ್ಲಿ ಲಕ್ಷ್ಮಿ ಮತ್ತು ಲಕ್ಷ್ಮೀನಾರಾಯಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆರಳೆಣಿಕೆಯಷ್ಟು ಮಂದಿ ಮದುವೆಯಲ್ಲಿ ಭಾಗವಹಿಸಿದ್ದಾರೆ.
- Advertisement -