Saturday, June 28, 2025
Homeತಾಜಾ ಸುದ್ದಿಐಟಿಐ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಎರಡು ದಿನ ಮುಟ್ಟಿನ ರಜೆ; ಕೇರಳ ಸರ್ಕಾರದಿಂದ ಐತಿಹಾಸಿಕ ಘೋಷಣೆ

ಐಟಿಐ ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಎರಡು ದಿನ ಮುಟ್ಟಿನ ರಜೆ; ಕೇರಳ ಸರ್ಕಾರದಿಂದ ಐತಿಹಾಸಿಕ ಘೋಷಣೆ

spot_img
- Advertisement -
- Advertisement -

ತಿರುವನಂತಪುರ: ಕೇರಳ ಸರ್ಕಾರವು ಐಟಿಐ(ಕೈಗಾರಿಕಾ ತರಬೇತಿ ಸಂಸ್ಥೆಯ)ವಿದ್ಯಾರ್ಥಿನಿಯರಿಗೆ ತಿಂಗಳಿಗೆ ಎರಡು ದಿನ ಮುಟ್ಟಿನ ರಜೆ ನೀಡುವ ಮೂಲಕ ಐತಿಹಾಸಿಕ ಘೋಷಣೆಯನ್ನು ಮಾಡಿದೆ.

ಈ ನಿರ್ಧಾರವನ್ನು ರಾಜ್ಯದ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಅವರು ಪ್ರಕಟಿಸಿದ್ದು, ಇದಕ್ಕೆ ಮುಖ್ಯ ಕಾರಣ ದೈಹಿಕ ಶ್ರಮ ಬೇಡುವ ಬಹಳಷ್ಟು ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿನಿಯರು ಉತ್ತಮ ಸಾಧನೆ ಮಾಡಿದ್ದಾರೆ. ಈ ಅಂಶಗಳನ್ನು ಪರಿಗಣಿಸಿ ಐಟಿಐ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಎರಡು ದಿನಗಳ ಮುಟ್ಟಿನ ರಜೆ ನೀಡಲು ಸರ್ಕಾರ ನಿರ್ಧರಿಸಿದೆ. ಎಷ್ಟು ಮಂದಿ ವಿದ್ಯಾರ್ಥಿನಿಯರಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರದ ಈ ಅನುಕೂಲವು ಕೇರಳದ 100ಕ್ಕೂ ಅಧಿಕ ಐಟಿಐ ಕಾಲೇಜುಗಳಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಸಿಗಲಿದೆ.

- Advertisement -
spot_img

Latest News

error: Content is protected !!