Wednesday, June 3, 2026
Homeಕರಾವಳಿನೆಲ್ಯಾಡಿ ಪರಿಸರದಲ್ಲಿ ಇಬ್ಬರಿಗೆ ಕೊರೋನಾ: ಅಶ್ವಿನಿ ಆಸ್ಪತ್ರೆ ಸೀಲ್ ಡೌನ್

ನೆಲ್ಯಾಡಿ ಪರಿಸರದಲ್ಲಿ ಇಬ್ಬರಿಗೆ ಕೊರೋನಾ: ಅಶ್ವಿನಿ ಆಸ್ಪತ್ರೆ ಸೀಲ್ ಡೌನ್

- Advertisement -
- Advertisement -

ನೆಲ್ಯಾಡಿ: ಕಡಬ ತಾಲೂಕಿನ ಹಾಗೂ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕೌಕ್ರಾಡಿ ಗ್ರಾಮದ ನೆಲ್ಯಾಡಿ ಪರಿಸರದಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢವಾಗಿದೆ.

ಗ್ರಾಮದ ಮಣ್ಣಗುಂಡಿಯ 70 ವರ್ಷದ ಮಹಿಳೆಗೆ ಮತ್ತು ಪುತ್ಯೆಯ 75 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಆಗಿದೆ.

ಅಶ್ವಿನಿ ಆಸ್ಪತ್ರೆ ಸೀಲ್ ಡೌನ್:
ನೆಲ್ಯಾಡಿ ಭಾಗದ ಖ್ಯಾತ ಖಾಸಗಿ ಆಸ್ಪತ್ರೆಯಾಗಿರುವ ಅಶ್ವಿನಿ ಆಸ್ಪತ್ರೆಯಲ್ಲಿ ಮೇಲೆ ಉಲ್ಲೇಖಿಸಿರುವ ಮಣ್ಣಗುಂಡಿಯ ಮಹಿಳೆ ಮತ್ತು ಪುತ್ಯೆಯ ವ್ಯಕ್ತಿ ಜ್ವರದ ಹಿನ್ನಲೆಯಿಂದ ದಾಖಲಾಗಿದ್ದರು.

ಜ್ವರದ ತೀವ್ರತೆ ಹೆಚ್ಚಿದ್ದ ಕಾರಣ ಇಬ್ಬರ ಗಂಟಲ ದ್ರವವನ್ನು ಮಂಗಳೂರಿನ ಕೋವಿಡ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಇದರ ವರದಿ ನಿನ್ನೆ ತಡರಾತ್ರಿ ವೈದ್ಯರ ಕೈ ಸೇರಿದ್ದು, ಇಬ್ಬರಿಗೂ ಕೊರೋನಾ ಸೋಂಕು ತಗುಲಿದೆ. ಹಾಗಾಗಿ ಮುಂದಿನ 48 ಗಂಟೆಗಳ ಅಶ್ವಿನಿ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗುತ್ತದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

- Advertisement -

Latest News

error: Content is protected !!