Tuesday, May 7, 2024
Homeತಾಜಾ ಸುದ್ದಿಬ್ರಿಟನ್ ನಿಂದ ಕರ್ನಾಟಕಕ್ಕೆ ಬಂದ 14 ಮಂದಿಗೆ ಕೊರೊನಾ ಪಾಸಿಟಿವ್

ಬ್ರಿಟನ್ ನಿಂದ ಕರ್ನಾಟಕಕ್ಕೆ ಬಂದ 14 ಮಂದಿಗೆ ಕೊರೊನಾ ಪಾಸಿಟಿವ್

spot_img
- Advertisement -
- Advertisement -

ಬೆಂಗಳೂರು : ಯುಕೆ ವೈರಸ್ ಭೀತಿಯಿಂದಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯುಕೆಯಿಂದ ಬಂದವರನ್ನು ಪತ್ತೆ ಕಾರ್ಯದಲ್ಲಿ ತೊಡಗಿರುವಂತ ಆರೋಗ್ಯ ಇಲಾಖೆಯು, ಈಗಾಗಲೇ 1,638 ಯುಕೆ ಪ್ರವಾಸಿಗರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 14 ಜನರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿರುವುದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದ ಅವರು, ರಾಜ್ಯಕ್ಕೆ ಯುಕೆಯಿಂದ ಬಂದಂತ 1,638 ಜನರಿಗೆ ಯುಕೆ ವೈರಸ್ ಭೀತಿಯ ಮುಂಜಾಗ್ರತಾ ಕ್ರಮವಾಗಿ, ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂತಹ 1,638 ಜನರಲ್ಲಿ 14 ಜನರ ಪರೀಕ್ಷೆಯ ವರದಿಯಲ್ಲಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಹೆಚ್ಚಿನ ಪರೀಕ್ಷೆಗಾಗಿ ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ. ನಾಳೆ ಕೊರೋನಾ ರೂಪಾಂತರ ವೈರಸ್ ಇದ್ಯಾ ಎನ್ನುವ ಬಗ್ಗೆ ವರದಿಯಿಂದ ತಿಳಿಯಲಿದೆ ಎಂಬುದಾಗಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!