Friday, June 5, 2026
Homeಕರಾವಳಿಕೇರಳದಲ್ಲಿ 51 ವರ್ಷದ ಮಹಿಳೆ ಸಂಶಯಾಸ್ಪದ ಸಾವು: 26 ವರ್ಷದ ಪತಿಯ ಬಂಧನ

ಕೇರಳದಲ್ಲಿ 51 ವರ್ಷದ ಮಹಿಳೆ ಸಂಶಯಾಸ್ಪದ ಸಾವು: 26 ವರ್ಷದ ಪತಿಯ ಬಂಧನ

- Advertisement -
- Advertisement -

ಕೇರಳ: 51 ವರ್ಷದ ಪತ್ನಿಯ ‘ಅನುಮಾನಾಸ್ಪದ’ ಸಾವಿಗೆ ಸಂಬಂಧಪಟ್ಟಂತೆ ಕೇರಳ ಪೊಲೀಸರು 26 ವರ್ಷದ ಆಕೆಯ ಪತಿಯನ್ನು ಬಂಧಿಸಿದ್ದಾರೆ.ಮೃತ ಮಹಿಳೆಯನ್ನು ಕಾರಕೋಣಂನ ಥ್ರೆಸ್ಯಾಪುರಂನ ಸಖಾ ಕುಮಾರಿ ಎಂದು ಗುರುತಿಸಲಾಗಿದೆ.

ಕ್ರಿಸ್‌ಮಸ್ ಅಲಂಕಾರದ ವೇಳೆ ಪತ್ನಿಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ಪತಿ ಅರುಣ್ ಮಹಿಳೆಯನ್ನು ಇಂದು ಬೆಳಗ್ಗೆ ಹತ್ತಿರದ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

 ಆದರೆ ವೈದ್ಯರು ಮಹಿಳೆಯ ದೇಹದ ಪ್ರಾಥಮಿಕ ಪರೀಕ್ಷೆ ನಡೆಸಿದಾಗ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅರುಣ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸಖಾ ಹಾಗೂ ಅರುಣ್ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು ಎಂದು ಸಖಾ ಕುಮಾರಿ ಅವರ ಸಂಬಂಧಿಕರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ವಿಧಿವಿಜ್ಞಾನ ತಂಡ ಅರುಣ್ ಅವರ ಮನೆಯಲ್ಲಿ ವಿದ್ಯುತ್ ಅಲಂಕಾರವನ್ನು ಪರಿಶೀಲಿಸಿದೆ. ಸಾವಿಗೆ ಕಾರಣವನ್ನು ಕಂಡುಹಿಡಿಯಲು ಮರಣೋತ್ತರ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!