Saturday, May 4, 2024
Homeಕರಾವಳಿಉಡುಪಿಬೈಂದೂರು: ಡೆಂಗ್ಯೂ ನಿಯಂತ್ರಣಕ್ಕೆ 13 ತಂಡ ರಚನೆ:ಆರೋಗ್ಯ ಇಲಾಖೆಯಿಂದ ಚುರುಕುಗೊಂಡ ಕಾರ್ಯಾಚರಣೆ    

ಬೈಂದೂರು: ಡೆಂಗ್ಯೂ ನಿಯಂತ್ರಣಕ್ಕೆ 13 ತಂಡ ರಚನೆ:ಆರೋಗ್ಯ ಇಲಾಖೆಯಿಂದ ಚುರುಕುಗೊಂಡ ಕಾರ್ಯಾಚರಣೆ    

spot_img
- Advertisement -
- Advertisement -

ಕೊಲ್ಲೂರು:ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಬೈಂದೂರು ತಾಲೂಕು ವ್ಯಾಪ್ತಿಯ ಕೊಲ್ಲೂರು, ಮುದೂರು, ಜಡ್ಕಲ್ ಪ್ರದೇಶಗಳ ಸಾರ್ವಜನಿಕರಲ್ಲಿ ನಿರಂತರವಾಗಿ ಕಂಡು ಬರುತ್ತಿರುವ ಡೆಂಘಿ ಜ್ವರದ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಮರೋಪಾದಿಯ ಕಾರ್ಯಾಚರಣೆ ಕೈಗೊಂಡಿದೆ. ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕಿಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು, ವೈದ್ಯರು, ಶುಶ್ರೂಷಕಿಯರು,ಆಶಾ ಕಾರ್ಯಕರ್ತೆಯರು ಸೇರಿದಂತೆ ರೋಗ್ಯ ಇಲಾಖೆಯ ಸಿಬ್ಬಂದಿಗಳು ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಈ ವರ್ಷ ಮಾರ್ಚ್ ನಿಂದ ಈ ಭಾಗದಲ್ಲಿ ಡೆಂಘಿ ಪೀಡಿತರ ಸಂಖ್ಯೆ ಅಧಿಕವಾಗುತಿದ್ದು, ಜನವರಿಯಿಂದ ಇದುವರೆಗೂ ಜಿಲ್ಲೆಯಲ್ಲಿ 160 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.ಅದರಲ್ಲಿ 120 ಕ್ಕೂ ಹೆಚ್ಚು ಈ ವ್ಯಾಪ್ತಿಯಲ್ಲಿಯೇ ಇದೆ. ಈಗಾಗಲೇ ಡೆಂಘಿ ಪೀಡಿತರಿಗಾಗಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ವಿಶೇಷ ವಾರ್ಡ್ ಸಿದ್ದಪಡಿಸಿದ್ದು, ಇವುಗಳಲ್ಲಿ 25 ಪುರುಷ,25 ಮಹಿಳೆ ಮತ್ತು 10 ಬೆಡ್ ಗಳನ್ನು ಮಕ್ಕಳಿಗೆ ಮೀಸಲಿಟ್ಟಿದೆ.

ಹೆಚ್ಚಿನ ಪ್ರಕರಣಗಳು ವರಿಯಾಗುತ್ತಿರುವ ಮುದೂರು ಮತ್ತು ಜಡ್ಕಲ್ ನಲ್ಲಿ ನಿರಂತರ ನಿಗಾವಹಿಸಲು ಆರೋಗ್ಯಾಧಿಕಾರಿಗಳನ್ನು ಒಳಗೊಂಡ 13 ತಂಡಗಳನ್ನು ರಚಿಸಿದ್ದು, ಈ ತಂಡದ ಸದಸ್ಯರು ಪ್ರತಿದಿನ ಮನೆಮನೆಗೆ ತೆರಳಿ ಡೆಂಘಿ ಕುರಿತು ಅರಿವು ಮೂಡಿಸುವುದರ ಜೊತೆಗೆ ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಿ, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡಲಾಗುತ್ತಿದೆ. ಈ ಎರಡೂ ಗ್ರಾಮಗಳ ಮನೆಗಳಿಗೆ ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಉಚಿತವಾಗಿ ಸೊಳ್ಳೆ ಪರದೆಗಳನ್ನು ಸರಬರಾಜು ಮಾಡಲಾಗಿದ್ದು, ಎಲ್ಲ ಮನೆಗಳಿಗೆ ತಲಾ 2 ಬಾಟೆಲ್ ಡಿಎಂಪಿ ತೈಲವನ್ನು ವಿತರಿಸಲಾಗಿದೆ.

- Advertisement -
spot_img

Latest News

error: Content is protected !!