Tuesday, July 14, 2026
Homeಕರಾವಳಿಮಂಗಳೂರು: ರೈಲಿನಡಿ ಸಿಲುಕಿ 13 ಎಮ್ಮೆಗಳು ಸಾವು

ಮಂಗಳೂರು: ರೈಲಿನಡಿ ಸಿಲುಕಿ 13 ಎಮ್ಮೆಗಳು ಸಾವು

- Advertisement -
- Advertisement -

ಸುರತ್ಕಲ್: ಮಂಗಳೂರಿನ ಸುರತ್ಕಲ್ ಸಮೀಪದ ತೋಕೂರು ಬಳಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲಿಗೆ ಸಿಲುಕಿ 13ಕ್ಕೂ ಹೆಚ್ಚು ಎಮ್ಮೆಗಳು ಸಾವಿಗಿಡಾಗಿದೆ ಎಂದು ತಿಳಿದುಬಂದಿದೆ.

ಇವುಗಳೆಲ್ಲಾ ಬೀಡಾಡಿ ಎಮ್ಮೆಗಳಾಗಿದ್ದು, ಗುಂಪು ಗುಂಪಾಗಿ ಒಂದೆಡೆಯಿಂದ ಇನ್ನೊಂದು ಕಡೆಗೆ ತೆರಳುತ್ತಿದ್ದವು. ತಡರಾತ್ರಿ ರೈಲು ಟ್ರ್ಯಾಕ್ ಮೇಲೆ ಗುಂಪಾಗಿ ನಡೆದುಕೊಂಡು ಹೋಗುವ ವೇಳೆಗೆ ರೈಲು ಢಿಕ್ಕಿ ಹೊಡೆದಿರಬಹುದು ಎಂದು ಅಂದಾಜಿಸಲಾಗಿದೆ.

ರೈಲ್ವೇ ಇಲಾಖೆಯ ಸಹಕಾರದೊಂದಿಗೆ ಹಿಂದೂ ಸಂಘಟನೆಗಳು ಎಮ್ಮೆಗಳ ಅಂತ್ಯ ಸಂಸ್ಕಾರ ನಡೆಸಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!