- Advertisement -
![]()
- Advertisement -
ಉಡುಪಿಯ ಪ್ರತಿಷ್ಠಿತ ಪರ್ಯಾಯ ಮಹೋತ್ಸವಕ್ಕೆ ಅದಮ್ಯ ಚೇತನ ಸಂಸ್ಥೆಯು 12,000 ಸ್ಟೇನ್ಲೆಸ್ ಸ್ಟೀಲ್ ತಟ್ಟೆಗಳನ್ನು ಕಳುಹಿಸಿಕೊಡುತ್ತಿದೆ.
‘ಅನಂತ ಪ್ಲೇಟ್ ಬ್ಯಾಂಕ್’ ಯೋಜನೆಯ ಮೂಲಕ ಬಳಸಿ ಬಿಸಾಡುವ ತಟ್ಟೆಗಳ ಬದಲು ಮರುಬಳಕೆಯ ತಟ್ಟೆಗಳನ್ನು ಒದಗಿಸುತ್ತದ್ದು, ಇದರಿಂದ ನೂರಾರು ಟ್ರಕ್ ಲೋಡ್‌ಗಳಷ್ಟು ಕಸ ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದುಎಂದು ಅದಮ್ಯ ಚೇತನ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಈಗಾಗಲೇ ೩೨ಕ್ಕೂ ಹೆಚ್ಚು ಪ್ಲೇಟ್ ಬ್ಯಾಂಕ್‌ಗಳು ಸಕ್ರಿಯವಾಗಿದ್ದು, ಶೀಘ್ರದಲ್ಲೇ ಈ ಸಂಖ್ಯೆಯನ್ನು ೫೦ಕ್ಕೇರಿಸುವ ಗುರಿ ಸಂಸ್ಥೆಯದ್ದಾಗಿದೆ. ಉಚಿತವಾಗಿ ತಟ್ಟೆಗಳನ್ನು ಪಡೆಯಲು ಅಥವಾ ನಿಮ್ಮ ಪ್ರದೇಶದಲ್ಲಿ ಪ್ಲೇಟ್ ಬ್ಯಾಂಕ್ ಪ್ರಾರಂಭಿಸಲು ಹೆಚ್ಚಿನ ಮಾಹಿತಿಗಾಗಿ www.adamyachetana.org ಗೆ ಭೇಟಿ ನೀಡಬಹುದು.
- Advertisement -


