Saturday, June 13, 2026
Homeಕರಾವಳಿಉಳ್ಳಾಲದಲ್ಲಿ 12 ವರ್ಷದ ಬಾಲಕನ ಕೊಲೆ: ಮನೆಯಿಂದ ಮೂರು ಕಿ.ಮೀ ದೂರದಲ್ಲಿ ಮೃತದೇಹ ಪತ್ತೆ

ಉಳ್ಳಾಲದಲ್ಲಿ 12 ವರ್ಷದ ಬಾಲಕನ ಕೊಲೆ: ಮನೆಯಿಂದ ಮೂರು ಕಿ.ಮೀ ದೂರದಲ್ಲಿ ಮೃತದೇಹ ಪತ್ತೆ

- Advertisement -
- Advertisement -

ಉಳ್ಳಾಲ: 12 ವರ್ಷದ ಬಾಲಕನೊಬ್ಬನನ್ನು ಕೊಲೆಗೈದಿರುವ ಘಟನೆ  ಉಳ್ಳಾಲದ ಕೆ ಸಿ ರೋಡ್ ಬಳಿ ನಡೆದಿದೆ.

ಕೊಲೆಯಾದ ಬಾಲಕನನ್ನು ಕೆ.ಸಿ ರೋಡ್ ನಿವಾಸಿ ಹನೀಫ್ ಎಂಬವರ ಪುತ್ರ ಆಕೀಫ್ (12) ಎಂದು ಗುರುತಿಸಲಾಗಿದೆ. ಈತ ಫನಾಹ್ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತ್ತಿದ್ದ. ಇಂದು ಬೆಳಗ್ಗೆ  ಮನೆಯಿಂದ ಮೂರು ಕಿ.ಮೀ ದೂರದಲ್ಲಿ ಬಾಲಕನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನಿನ್ನೆ ರಾತ್ರಿಯಿಂದ ಬಾಲಕ ನಾಪತ್ತೆಯಾಗಿದ್ದ ಕುರಿತು ಆತನ ಹೆತ್ತವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು‌ ದಾಖಲಿಸಿದ್ದರು. ಆದರೆ ಇಂದು ಬಾಲಕನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ

- Advertisement -

Latest News

error: Content is protected !!