- Advertisement -
- Advertisement -
ಮುಂಬೈ: ಮಹಾನಗರಿಯ ಚೆಂಬೂರು, ಘಾಟ್‌ಕೋಪರ್, ಕಾಂಜೂರ್ ಮಾರ್ಗ್, ವಿಕ್ರೋಲಿ, ಅಂಧೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಂದ ಕೆಟ್ಟ ವಾಸನೆ ಅನುಭವಕ್ಕೆ ಬಂದಿದ್ದು, ಈ ಬಗ್ಗೆ ಮುಂಬೈ ಮಹಾನಗರ ಪಾಲಿಕೆಗೆ ದೂರು ನೀಡಿದ್ದರು. ಗ್ಯಾಸ್ ಸೋರಿಕೆ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು.
ಆದರೆ ಮುಂಬೈ ನಗರದಲ್ಲಿ ಯಾವುದೇ ರೀತಿಯ ಗ್ಯಾಸ್ ಸೋರಿಕೆಯಾಗಿಲ್ಲ ಎಂದು ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮುಂಬೈ ಮಹಾನಗರ ಪಾಲಿಕೆ 17 ಅಗ್ನಿ ಶಾಮಕ ದಳಗಳನ್ನು ಗ್ಯಾಸ್ ಸೋರಿಕೆ ಪತ್ತೆ ಮಾಡಲು ನಿಯೋಜನೆ ಮಾಡಿತ್ತು. ಭಾನುವಾರ ಮಧ್ಯಾಹ್ನದ ತನಕ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗಿದ್ದು, ಗ್ಯಾಸ್ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಗ್ಯಾಸ್ ಸೋರಿಕೆಯಾಗಿಲ್ಲ ಜನರು ಆತಂಕಗೊಳ್ಳುವುದು ಬೇಡ ಎಂದು ಅಗ್ನಿ ಶಾಮಕ ದಳದ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ.
- Advertisement -