Wednesday, May 29, 2024
Homeಕರಾವಳಿಅಪರಾಧ ಹಿನ್ನಲೆಯುಳ್ಳ 11 ಮಂದಿ 6 ತಿಂಗಳುಗಳ ಕಾಲ ದ.ಕ.ಜಿಲ್ಲೆಯಿಂದ ಗಡಿಪಾರು; ಜಿಲ್ಲಾಧಿಕಾರಿಯಿಂದ ಆದೇಶ

ಅಪರಾಧ ಹಿನ್ನಲೆಯುಳ್ಳ 11 ಮಂದಿ 6 ತಿಂಗಳುಗಳ ಕಾಲ ದ.ಕ.ಜಿಲ್ಲೆಯಿಂದ ಗಡಿಪಾರು; ಜಿಲ್ಲಾಧಿಕಾರಿಯಿಂದ ಆದೇಶ

spot_img
- Advertisement -
- Advertisement -

ಮಂಗಳೂರು;  ಚುನಾವಣೆ ಹತ್ತಿರವಗುತ್ತಿದ್ದಂತೆ ದ ಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು  ನಿಟ್ಟಿನಲ್ಲಿ ಗಮನ ಹರಿಸಿರುವ ಜಿಲ್ಲಾಧಿಕಾರಿ ರಮಿಕುಮಾರ್ ಅವರು ಅಪರಾಧ ಹಿನ್ನೆಲೆಯುಳ್ಳ ಹನ್ನೊಂದು ಮಂದಿಯನ್ನು 6 ತಿಂಗಳ ಕಾಲ ದ.ಕ.ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯ ಆಧಾರದ ಮೇಲೆ ತನಿಖೆ ನಡೆಸಿರುವ ಜಿಲ್ಲಾಧಿಕಾರಿ, ಅಪರಾಧ ಪ್ರವೃತ್ತಿಯುಳ್ಳ, ಸಮಾಜದ ಸ್ವಾ‌ಸ್ಥ್ಯಕ್ಕೆ ಗಂಡಾಂತರಕಾರಿಯಾಗಿರುವ ಆರೋಪದಲ್ಲಿ ಇವರನ್ನು ಗಡಿಪಾರು ಮಾಡಿದ್ದಾರೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಜಯರಾಜ್ ರೈ ಯಾನೆ ಜಯರಾಜ ಶೆಟ್ಟಿ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಇಬ್ರಾಹಿಂ ಯಾನೆ ಇಬ್ಬಿ , ಹಕೀಂ ಕೂರ್ನಡ್ಕ ಯಾನೆ ಅಬ್ದುಲ್, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಅಬೂಬಕ್ಕರ್ ಸಿದ್ದೀಕ್ ಯಾನೆ ಜೆಸಿಬಿ ಸಿದ್ದೀಕ್ ಯಾನೆ ಸಿದ್ದೀಕ್  34ನೆಕ್ಕಿಲಾಡಿ, ಉಬೈದ್ ಬಿ.ಎಸ್.ಯಾನೆ ಉಬೈದ್ ಕುಪ್ಪೆಟ್ಟಿ, , ತಸ್ಲೀಂ ಯಾನೆ ತಸಲೀಂ ತಣ್ಣೀರುಪಂಥ, ಬೆಳ್ಳಾರೆ ಠಾಣಾ ವ್ಯಾಪ್ತಿಯ ರೋಷನ್, ಪ್ರಸಾದ್ ಇಡ್ಯಾಡಿ ಸವಣೂರು, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ನಜೀರ್ ಕುಣಿಗಲ್, ಇಬ್ರಾಹಿಂ ಖಲೀಲ್, ಬಾಳ್ತಿಲ ಗ್ರಾಮ ಹಾಗೂ ಧರ್ಮಸ್ಥಳ ಠಾಣಾ ವ್ಯಾಪ್ತಿಯ ಕಿರಣ್ ಕುಮಾರ್ ಡಿ.ಯಾನೆ ಕಿರಣ್ ಇವರನ್ನು ಮಾರ್ಚ್ 6ರಿಂದ ಸೆಪ್ಟೆಂಬರ್ 6ರ ತನಕ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.

- Advertisement -
spot_img

Latest News

error: Content is protected !!