Saturday, June 6, 2026
Homeಕರಾವಳಿಪುತ್ತೂರು: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣು

ಪುತ್ತೂರು: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆಗೆ ಶರಣು

- Advertisement -
- Advertisement -

ಪುತ್ತೂರು:  ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮರೀಲು ಕಾಡು ಮನೆಯಲ್ಲಿ ನಡೆದಿದೆ.ಆಟೋ ರಿಕ್ಷಾ ಚಾಲಕ, ಮೂಲತಃ ಜಾಲ್ಸೂರಿನ ಕುಕ್ಕಂದೂರಿನ ಮನೋಜ್‌ ಅವರ ಪತ್ನಿ ಸಂಧ್ಯಾ (45) ಮೃತ ದುರ್ದೈವಿ.

ದಂಪತಿ 20 ವರ್ಷಗಳಿಂದ ಪುತ್ತೂರಿನ ಮರೀಲ್‌ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೇ 27ರಂದು ರಾತ್ರಿ ರಿಕ್ಷಾದಲ್ಲಿ ಬಾಡಿಗೆಗೆ ತೆರಳಿದ್ದ ಮನೋಜ್‌ ಮೇ 28ರಂದು ಬೆಳಗ್ಗೆ ಮನೆಗೆ ಬಂದಾಗ ಪತ್ನಿ ಮನೆಯ ಹಾಲ್‌ನ ಕಿಟಕಿಗೆ ನೇಣು ಬಿಗಿದುಕೊಂಡು ಅಸ್ವಸ್ಥ ಸ್ಥಿತಿಯಲ್ಲಿದ್ದರು.ತಕ್ಷಣ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಸಂಧ್ಯಾ ಅವರು ಮೃತಪಟ್ಟಿದ್ದರು.ಮೃತರು ಪತಿ ಮನೋಜ್‌, ಪುತ್ರನನ್ನು ಅಗಲಿದ್ದಾರೆ.

- Advertisement -

Latest News

error: Content is protected !!