Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ: ಮನೆಯೊಳಗೆ ಸೇರಿಕೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

ಬೆಳ್ತಂಗಡಿ: ಮನೆಯೊಳಗೆ ಸೇರಿಕೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

- Advertisement -
- Advertisement -

ಬೆಳ್ತಂಗಡಿ: ಮನೆಯೊಳಗೆ ಬೃಹತ್ ಗಾತ್ರ ಕಾಳಿಂಗ ಸರ್ಪವೊಂದು ಬಂದು ಮಂಚದ ಅಡಿಯಲ್ಲಿ ಸೇರಿಕೊಂಡಿದ್ದ ಘಟನೆ ಇಂದಬೆಟ್ಟು ಎಂಬಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಇಂದಬೆಟ್ಟುವಿನ ಬಂಗಾಡಿ ಎಂಬಲ್ಲಿ ಮನೆಯೊಳಗೆ ಸೇರಿಕೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

ಮನೆಯ ಒಂದು ಭಾಗವನ್ನು ಮಾತ್ರ ಮನೆಯವರು ಬಳಸುತ್ತಿದ್ದು, ಮತ್ತೊಂದು ಭಾಗದಲ್ಲಿ ಇರಿಸಲ್ಪಟ್ಟಿದ್ದ ಮಂಚದ ಅಡಿಯಲ್ಲಿ ಸರ್ಪ ಸೇರಿಕೊಂಡಿತ್ತು ಎನ್ನಲಾಗಿದೆ.

ಮನೆಯ ಕೋಣೆಯ ಬಾಗಿಲು ತೆರೆದಾಗ ಮಂಚದಡಿಯಲ್ಲಿ ಶಬ್ದ ಕೇಳಿ ಬಂದಿದ್ದನ್ನು ನೋಡಿದಾಗ ಕಾಳಿಂಗ ಸರ್ಪ ಕಾಣಿಸಿದೆ ಎನ್ನಲಾಗಿದೆ.

ನಂತರ ಉರಗ ರಕ್ಷಕ ಅಶೋಕ್ ಲಾಯಿಲ ಅವರಿಗೆ ಮನೆಯವರು ಮಾಹಿತಿ ನೀಡಿದ ಬಳಿಕ ಅವರು ಸ್ಥಳಕ್ಕೆ ಬಂದು ಸುರಕ್ಷಿತವಾಗಿ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

- Advertisement -

Latest News

error: Content is protected !!