Friday, May 17, 2024
Homeಅಪರಾಧಮಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ 1.48 ಕೋಟಿ ರೂಪಾಯಿ ನಗದು ಮತ್ತು 800 ಗ್ರಾಂ ಚಿನ್ನಾಭರಣ- ಆರೋಪಿ...

ಮಂಗಳೂರು: ರೈಲಿನಲ್ಲಿ ಸಾಗಿಸುತ್ತಿದ್ದ 1.48 ಕೋಟಿ ರೂಪಾಯಿ ನಗದು ಮತ್ತು 800 ಗ್ರಾಂ ಚಿನ್ನಾಭರಣ- ಆರೋಪಿ ಪೊಲೀಸ್ ವಶಕ್ಕೆ

spot_img
- Advertisement -
- Advertisement -

ಮಂಗಳೂರು: ಮುಂಬೈ ಎಲ್ಟಿಟಿ-ಎರ್ನಾಕುಲಂ ದುರಂತೋ ರೈಲಿನಲ್ಲಿ ಸೂಕ್ತ ದಾಖಲೆಗಳಿಲ್ಲದೆ 1.48 ಕೋಟಿ ರೂಪಾಯಿ ನಗದು ಮತ್ತು 800 ಗ್ರಾಂ ಚಿನ್ನಾಭರಣವನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಮಂಗಳೂರಿನಲ್ಲಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಉದಯಪುರ ಮೂಲದ ಮಹೇಂದ್ರ ಸಿಂಗ್ ರಾವ್ (33)ನನ್ನು ಬಂಧಿತನಾಗಿದ್ದು, ಈತನನ್ನು ಮಂಗಳೂರು ಸೆಂಟ್ರಲ್‍ನಲ್ಲಿರುವ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಆರ್.ಪಿ.ಎಫ್ ಪ್ರಕಟಣೆ ತಿಳಿಸಿದೆ.

ಆರ್.ಪಿ.ಎಸ್ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರೈಲ್ವೆ ಪೊಲೀಸರು ಆತನ ಬಂಧನವನ್ನು ದಾಖಲಿಸಿದ್ದಾರೆ. ರೈಲ್ವೆ ಪೊಲೀಸ್ ಸಿಬ್ಬಂದಿ ದುರೊಂತೋ ಎಕ್ಸ್‍ಪ್ರೆಸ್‍ನ ಎಸ್ 4 ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಲಗೇಜ್‍ಗಳನ್ನು ಪರಿಶೀಲಿಸಿದಾಗ ಹಳೆಯ ದಿನಪತ್ರಿಕೆಗಳಲ್ಲಿ ಸುತ್ತಿದ ಕರೆನ್ಸಿ ಬಂಡಲ್‍ಗಳು ಸಿಕ್ಕಿವೆ.

ಕೇರಳದ ಕೋಝಿಕ್ಕೋಡ್‍ನಲ್ಲಿ ಪ್ರವೀಣ್ ಸಿಂಗ್ ಮಾಲೀಕತ್ವದ ಶುಭ್ ಗೋಲ್ಡ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ. ತಮ್ಮ ಮಾಲೀಕರು ಮುಂಬೈನಲ್ಲಿರುವ ಅವರ ಸ್ನೇಹಿತರಿಗೆ ನೀಡಲು ಆರು ಪ್ಯಾಕ್ ಕರೆನ್ಸಿ ನೋಟುಗಳು ಮತ್ತು ಮೂರು ಪ್ಯಾಕೆಟ್ ಆಭರಣಗಳನ್ನು ಕೊಟ್ಟಿದ್ದಾರೆ ಎಂದು ಮಹೇಂದ್ರ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾನೆ.

ವಶಪಡಿಸಿಕೊಂಡ ನಗದಿನಲ್ಲಿ 2 ಸಾವಿರ ಮತ್ತು ಐದು ನೂರು ರೂ. ಮುಖಬೆಲೆಯ ನೋಟುಗಳು, 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಸಿಕ್ಕಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!