Wednesday, April 16, 2025
Homeಉತ್ತರ ಕನ್ನಡಕಾರವಾರ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಮಂಗಳೂರು ಮೂಲದ ಕಾರಿನಲ್ಲಿ 1.15 ಕೋಟಿ ರೂಪಾಯಿ ಪತ್ತೆ

ಕಾರವಾರ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಮಂಗಳೂರು ಮೂಲದ ಕಾರಿನಲ್ಲಿ 1.15 ಕೋಟಿ ರೂಪಾಯಿ ಪತ್ತೆ

spot_img
- Advertisement -
- Advertisement -

ಕಾರವಾರ: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1.15 ಕೋಟಿ ರೂಪಾಯಿ ಪತ್ತೆಯಾಗಿರುವ ಘಟನೆ ಕಾರವಾರದ ಯಲ್ಲಾಪುರ ಅಂಕೋಲಾ ನಡುವಿನ ಹೆದ್ದಾರಿಯಲ್ಲಿ ಬರುವ ರಾಮನಗುಳಿ ಬಳಿ ನಡೆದಿದೆ. ನಿಲ್ಲಿಸಿದ್ದ ಕಾರ್ ನಲ್ಲಿ ಒಂದು ಕೋಟಿ ರೂ. ಪತ್ತೆಯಾಗಿದೆ. ಕಾರ್ ನಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಪರಿಶೀಲನೆ ವೇಳೆ ಕಾರಿಗೆ ಹಾಕಿದ ನಂಬರ್ ಪ್ಲೇಟ್ ಫೇಕ್ ಅನ್ನೋದು ಗೊತ್ತಾಗಿದೆ. ಕಾರು ಮಂಗಳೂರು ಮೂಲದವರದ್ದು ಎಂದು ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ. ಅಂಕೋಲಾ ದಿಂದ ಬಂದ ಪೊಲೀಸರು ಕಾರ್ ವಶಕ್ಕೆ ಪಡೆದು ಅದರಲ್ಲಿನ ಒಂದು ಕೋಟಿ ವಶಪಡಿಸಿಕೊಂಡಿದ್ದಾರೆ.

ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಗ್ರಾಮ ಇದೆ. ಇಲ್ಲಿ ಮಂಗಳವಾರ ಸಂಜೆ ನಿರ್ಜನ ಪ್ರದೇಶದಲ್ಲಿ ಯಾರು ಕಾರು ನಿಲ್ಲಿಸಿ ಹೋದರು ಎಂಬುದು ಬೆಳಕಿಗೆ ಬರಬೇಕಿದೆ.‌

- Advertisement -
spot_img

Latest News

error: Content is protected !!