Friday, July 5, 2024
Homeಕರಾವಳಿ“ಧರ್ಮದೈವ" ತುಳು ಸಿನೆಮಾ ಜು.5ರಂದು ಕರಾವಳಿಯಾದ್ಯಂತ ತೆರೆಗೆ

“ಧರ್ಮದೈವ” ತುಳು ಸಿನೆಮಾ ಜು.5ರಂದು ಕರಾವಳಿಯಾದ್ಯಂತ ತೆರೆಗೆ

spot_img
- Advertisement -
- Advertisement -

ಮಂಗಳೂರು: “ಧರ್ಮದೈವ’’ ತುಳು ಸಿನಿಮಾ ಧರ್ಮದೈವ ಪ್ರೊಡಕ್ಷನ್‌ ಲಾಂಛನದಲ್ಲಿ ನಿರ್ಮಾಣವಾಗಿದ್ದು, ಈ ಸಿನಿಮಾವು ಜು.5ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.

ಮಂಗಳೂರಿನ ರೂಪವಾಣಿ, ಭಾರತ್‌ ಸಿನೆಮಾಸ್‌, ಪಿವಿಆರ್‌, ಸಿನಿಪೊಲಿಸ್‌, ಸುರತ್ಕಲ್‌ನ ಸಿನಿಗ್ಯಾಲಕ್ಸಿ, ನಟರಾಜ್‌, ಪಡು ಬಿದ್ರಿಯ ಭಾರತ್‌ ಸಿನೆಮಾಸ್‌, ಉಡುಪಿಯ ಕಲ್ಪನಾ, ಭಾರತ್‌ ಸಿನೆಮಾಸ್‌, ಮಣಿಪಾಲದ ಐನಾಕ್ಸ್‌, ಭಾರತ್‌ ಸಿನೆಮಾಸ್‌, ಕಾರ್ಕಳದ ಪ್ಲಾನೆಟ್‌, ರಾಧಿಕಾ, ಪುತ್ತೂರಿನ ಭಾರತ್‌ ಸಿನೆಮಾಸ್‌, ಬೆಳ್ತಂಗಡಿಯ ಭಾರತ್‌ ಚಿತ್ರಮಂದಿರದಲ್ಲಿ ತೆರೆಕಾಣಲಿದೆ.

ನಿರ್ದೇಶಕ ನಿತಿನ್‌ ರೈ ಕುಕ್ಕುವಳ್ಳಿ ಪುಣೆ, ಮುಂಬಯಿಯಲ್ಲಿ ನಡೆದ ಪ್ರೀಮಿಯರ್‌ ಶೋ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ. ಅವರು ಸೋಮವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಪತ್ರಿಕಾಭವನದಲ್ಲಿ ಮಾತನಾಡಿ, ’ಈ ಸಿನೆಮಾ ತುಳುನಾಡಿನ ದೈವಾರಾಧನೆ, ಸಂಸ್ಕೃತಿ ಸಹಿತವಾಗಿ ಬದುಕಿನ ಕತೆಯನ್ನು ಕಟ್ಟಿಕೊಡುತ್ತದೆ,’ ಎಂದು ಹೇಳಿದರು.

“ಧರ್ಮದೈವ’ ತುಳು ಚಲನ ಚಿತ್ರದ ತಾರಾಗಣದಲ್ಲಿ ರಮೇಶ್‌ ರೈ ಕುಕ್ಕುವಳ್ಳಿ, ದೀಪಕ್‌ ರೈ ಪಾಣಾಜೆ, ಚೇತನ್‌ ರೈ ಮಾಣಿ, ರೂಪಶ್ರೀ ವರ್ಕಾಡಿ, ದಯಾನಂದ ರೈ ಬೆಟ್ಟಂಪಾಡಿ, ಭರತ್‌ ಶೆಟ್ಟಿ, ರವಿ ಸಾಲ್ಯಾನ್‌ (ಸ್ನೇಹಿತ್‌), ಸಂದೀಪ್‌ ಪೂಜಾರಿ, ಪುಷ್ಪರಾಜ್‌ ಬೊಳ್ಳರ್‌, ರಂಜನ್‌ ಬೋಳಾರ್‌, ಕೌಶಿಕ್‌ ರೈ ಕುಂಜಾಡಿ, ದೀûಾ ಡಿ.ರೈ ಹಾಗೂ ಗ್ರೇಷಿಯಲ್‌ ಕಲಿಯಂಡ ಕೊಡಗು ಮೊದಲಾದವರು ಅಭಿನಯಿಸಿದ್ದಾರೆ. ಚಿತ್ರ ಕಥೆ- ಸಂಭಾಷಣೆಯನ್ನು ಹಮೀದ್‌ ಪುತ್ತೂರು ಬರೆದಿದ್ದಾರೆ. ಅರುಣ್‌ ರೈ ಪುತ್ತೂರು ಇವರ ಛಾಯಾಗ್ರಹಣವಿದೆ ಎಂದವರು ತಿಳಿಸಿದರು.

ನಿರ್ಮಾಪಕ ಬಿಳಿಯೂರು ರಾಕೇಶ್‌ ಭೋಜರಾಜ ಶೆಟ್ಟಿ, ರಮೇಶ್‌ ರೈ ಕುಕ್ಕುವಳ್ಳಿ, ಚೇತನ್‌ ರೈ ಮಾಣಿ, ಅರುಣ್‌ ರೈ ಪುತ್ತೂರು ಮತ್ತಿತರರಿದ್ದರು.

- Advertisement -
spot_img

Latest News

error: Content is protected !!