Thursday, June 25, 2026
Homeತಾಜಾ ಸುದ್ದಿರೇಣುಕಾ ಸ್ವಾಮಿ ಕೊಲೆ ಪ್ರಕರಣ; ಪವಿತ್ರ ಗೌಡ ಸ್ನೇಹಿತೆ ಸೇರಿದಂತೆ ಮೂವರಿಗೆ ನೋಟಿಸ್

ರೇಣುಕಾ ಸ್ವಾಮಿ ಕೊಲೆ ಪ್ರಕರಣ; ಪವಿತ್ರ ಗೌಡ ಸ್ನೇಹಿತೆ ಸೇರಿದಂತೆ ಮೂವರಿಗೆ ನೋಟಿಸ್

- Advertisement -
- Advertisement -

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇನ್ನೂ ಕೂಡ ತನಿಖೆ ನಡೆಸುತ್ತಿದ್ದು ನಟಿ ಪವಿತ್ರ ಗೌಡ ಸ್ನೇಹಿತೆ ಸೇರಿದಂತೆ ಮೂವರಿಗೆ ನೋಟಿಸ್ ನೀಡಿದ್ದಾರೆ.ಪವಿತ್ರ ಗೌಡ ಸ್ನೇಹಿತೆ ಸಮತಾ ಸೇರಿದಂತೆ ಮೂವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಪವಿತ್ರ ಸ್ನೇಹಿತೆ ಸಮತಾಗು ನೋಟಿಸ್ ಜಾರಿ ಮಾಡಿದ್ದಾರೆ. ಆರೋಪಿ ಒಬ್ಬನಿಗೆ ಹಣದ ಸಹಾಯ ಮಾಡಿದ ಆರೋಪದ ಸಮತಾಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಅಲ್ಲದೆ ಇನ್ನೊಂದು ಕಡೆ ಪ್ರಭಾವಿ ಶಾಸಕರ ಕಾರು ಚಾಲಕ ಕಾರ್ತಿಕ್ ಎಂಬಾತನಿಗೂ ಕೂಡ ಪೊಲೀಸರು ಇದೀಗ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.  ಶಾಸಕರ ಕಾರು ಚಾಲಕನಿಗೂ ನೋಟಿಸ್ ಜಾರಿ ಮಾಡಿದ್ದಾರೆ.

ಶಾಸಕರ ಕಾರು ಚಾಲಕ ಕಾರ್ತಿಕ್ ಪುರೋಹಿತ ಎನ್ನುವವನೀಗೆ ನೋಟಿಸ್ ನೀಡಲಾಗಿದೆ.ನೋಟಿಸ್ ತಲುಪಿದ ಮೇಲೆ ಕಾರ್ತಿಕ ಪರಾರಿಯಾಗಿದ್ದಾನೆ. ಆರೋಪಿ ಪ್ರದೋಷಗೂ ಕೂಡ ಕಾರ್ತಿಕ್ ಆಪ್ತನಾಗಿದ್ದ ಎನ್ನಲಾಗುತ್ತಿದೆ.

ಮಾಜಿ ಉಪಮೇಯರ್ ಮೋಹನ್ ರಾಜ್ಗೆ ಪೊಲೀಸರು ನೋಟಿಸ್ ನೀಡಿದ್ದಾರೆ ಮೋಹನ್ ರಾಜ್ಗೆ ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದಾರೆ ಬಸವೇಶ್ವರನಗರ ಪೊಲೀಸ್ ಠಾಣೆಗೆ ಹಾಜರಾಗಲು ಪೊಲೀಸರು ಸೂಚನೆ ನೀಡಿದ್ದಾರೆ ದರ್ಶನ್ಗೆ 40 ಲಕ್ಷ ಹಣ ನೀಡಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಈ ಕುರಿತು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

- Advertisement -

Latest News

error: Content is protected !!