Saturday, April 27, 2024
Homeಕರಾವಳಿದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವು; ಸ್ಕೂಟರ್ ನಲ್ಲಿದ್ದ ಯುವತಿ ಗಂಭೀರ

ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಸಾವು; ಸ್ಕೂಟರ್ ನಲ್ಲಿದ್ದ ಯುವತಿ ಗಂಭೀರ

spot_img
- Advertisement -
- Advertisement -

ಬೆಳ್ತಂಗಡಿ : ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ನಡೆದಿದೆ.

ಬೆಳ್ತಂಗಡಿ ನಗರದ ಸಂತೆಕಟ್ಟೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಮಾ.28 ರಂದು ರಾತ್ರಿ ಶೇಖರ್ ಬಂಗೇರ ಹೇರಾಜೆ(65) ಎಂಬವರು ಹೋಟೆಲ್ ನಿಂದ ಪಾರ್ಸಲ್ ತೆಗೆದುಕೊಂಡು ರಸ್ತೆ ದಾಟುತ್ತಿದ್ದ ವೇಳೆ, ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಬಂಟ್ವಾಳದಲ್ಲಿ ಸಾವನ್ನಪ್ಪಿದ್ದಾರೆ.

ಇನ್ನೂ ಸ್ಕೂಟರ್ ನಲ್ಲಿದ್ದ ಬೆಳ್ತಂಗಡಿಯ ಗೇರುಕಟ್ಟೆ ನಿವಾಸಿ ಅನುಷಾ (19) ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮೃತಪಟ್ಟ ಶೇಖರ್ ಬಂಗೇರ ಹೇರಾಜೆ ಮಾಜಿ ವಿಜಯ ಬ್ಯಾಂಕ್ ಉದ್ಯೋಗಿ, ಮುಗ್ಗ ಗುತ್ತು ಮನೆತನದ ಟ್ರಸ್ಟ್ ಕೋಶಾಧಿಕಾರಿ, ರಾಘವೇಂದ್ರ ಮಠದ ಕೋಶಾಧಿಕಾರಿ, ಗುರುನಾರಾಯಣ ಸಂಘದ ಮಾಜಿ ಉಪಾಧ್ಯಕ್ಷರಾಗಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರ ಮಾವ.

- Advertisement -
spot_img

Latest News

error: Content is protected !!