Sunday, June 7, 2026
Homeಇತರಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ಸೆಪ್ಟೆಂಬರ್ 17 ರಿಂದ ಪೂರೈಕೆ ಸ್ಥಗಿತ ಮಾಡಲಿರುವ ಜೊಮ್ಯಾಟೊ

ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ಸೆಪ್ಟೆಂಬರ್ 17 ರಿಂದ ಪೂರೈಕೆ ಸ್ಥಗಿತ ಮಾಡಲಿರುವ ಜೊಮ್ಯಾಟೊ

- Advertisement -
- Advertisement -

ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುತ್ತಿದ್ದ ಆನ್​ಲೈನ್​ ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಜೊಮ್ಯಾಟೊ ಕಂಪನಿ ಇದೇ ಸೆಪ್ಟೆಂಬರ್ 17ರಿಂದ ಆ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ದಿನಸಿ ಸಾಮಗ್ರಿಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಇದು ಗ್ರಾಹಕರಲ್ಲಿ ಬೇಸರ ಹಾಗೂ ಅಸಮಾಧಾನ ಮೂಡಿಸುತ್ತಿದೆ. ಹೀಗಾಗಿ ಮನೆಬಾಗಿಲಿಗೆ ದಿನಸಿ ಪೂರೈಕೆ ಮಾಡುವ ಸೇವೆಯನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ಜೊಮ್ಯಾಟೊ ಕಂಪನಿ ತಿಳಿಸಿದೆ.

ಜೊಮ್ಯಾಟೊದಲ್ಲಿ, ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಮತ್ತು ನಮ್ಮ ವ್ಯಾಪಾರಿ ಪಾಲುದಾರರಿಗೆ ಅತಿದೊಡ್ಡ ಬೆಳವಣಿಗೆಯ ಅವಕಾಶಗಳನ್ನು ನೀಡುತ್ತಿರುವುದಾಗಿ ನಾವು ನಂಬುತ್ತೇವೆ. ನಮ್ಮ ಗ್ರಾಹಕರು ಮತ್ತು ವ್ಯಾಪಾರಿ ಪಾಲುದಾರರಿಗೆ ಇವುಗಳನ್ನು ತುಲಪಿಸಲು ಪ್ರಸ್ತುತ ಮಾದರಿಯು ಉತ್ತಮ ಮಾರ್ಗ ಎಂದು ನಾವು ನಂಬುವುದಿಲ್ಲ. ಹೀಗಾಗಿ ಸೆಪ್ಟೆಂಬರ್ 17ರಿಂದ ದಿನಸಿ ಸಾಮಗ್ರಿಗಳನ್ನು ಪೂರೈಸುವ ಸೇವೆಯನ್ನು ನಿಲ್ಲಿಸಲು ಉದ್ದೇಶಿಸಲಾಗಿದೆ ಎಂದು ದಿನಸಿ ಸಾಮಗ್ರಿಗಳನ್ನು ಪೂರೈಸುವ ಪಾಲುದಾರರಿಗೆ ಇ-ಮೇಲ್​ ಮೂಲಕ ಜೊಮ್ಯಾಟೊ ತಿಳಿಸಿದೆ.

ಜೊಮ್ಯಾಟೊಗೆ ತೃಪ್ತಿದಾಯಕ ಗ್ರಾಹಕರ ಅನುಭವವನ್ನು ನೀಡುವುದು ಕಷ್ಟಕರವಾಗಿದೆ. ಹೀಗಾಗಿ ಕಂಪನಿಯು ತನ್ನ ದಿನಸಿ ವಿತರಣಾ ಸೇವೆಯನ್ನು ನಿಲ್ಲಿಸಲು ಬಯಸಿದೆ. ತನ್ನ ಪ್ಲಾಟ್​ಫಾರ್ಮ್​ ಮೂಲಕ ಬೇರೆ ಯಾವುದೇ ದಿನಸಿ ವಿತರಣೆ ಮಾಡುವ ಯೋಜನೆಯನ್ನು ಹೊಂದಿಲ್ಲ ಎಂದು ಜೊಮ್ಯಾಟೊ ವಕ್ತಾರರು ಹೇಳಿದ್ದಾರೆ.

- Advertisement -

Latest News

error: Content is protected !!