Friday, May 3, 2024
Homeತಾಜಾ ಸುದ್ದಿಬೆಂಗಳೂರು: ಮಹಿಳೆಯ ಮೂಗು ಮೂರಿದಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜು ಅರೆಸ್ಟ್​

ಬೆಂಗಳೂರು: ಮಹಿಳೆಯ ಮೂಗು ಮೂರಿದಿದ್ದ ಜೊಮ್ಯಾಟೊ ಡೆಲಿವರಿ ಬಾಯ್ ಕಾಮರಾಜು ಅರೆಸ್ಟ್​

spot_img
- Advertisement -
- Advertisement -

ಬೆಂಗಳೂರು: ಡೆಲಿವರಿ ತಡವಾಗಿದ್ದನ್ನು ಪ್ರಶ್ನಿಸಿದ್ದ ಮಹಿಳೆಯ ಮೂಗಿದೆ ಪಂಚ್ ಮಾಡಿದ್ದ ಜೊಮ್ಯಾಟೋ ಬಾಯ್ ನನ್ನು ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಡೆಲಿವರಿ ತಡವಾಗಿದ್ದಕ್ಕೆ ಮಹಿಳೆ ಮತ್ತು ಜೊಮ್ಯಾಟೋ ಬಾಯ್ ನಡುವೆ ವಾಗ್ವಾದ ನಡೆದು ಆತ ಮಹಿಳೆಯ ಮೂಗಿಗೆ ಪಂಚ್ ಮಾಡಿದ್ದರು. ಈ ಸಂಬಂಧ ಡೆಲಿವರಿ ಬಾಯ್ ಕಾಮರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಡೆಲಿವರಿ ಬಾಯ್ ಕಾಮರಾಜ್​, ಹಿತೇಶಾ ಚಂದ್ರಾಣಿ ಎಂಬ ಯುವತಿಯ ಮೇಲೆ ಹಲ್ಲೆ ನಡೆಸಿದ್ದ. ಇದರಿಂದ ಆಘಾತಕ್ಕೊಳಗಾಗಿರುವ ಯುವತಿ ಘಟನಾವಳಿಯ ವಿವರಗಳನ್ನು ಇಂದು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಭಾರೀ ಚರ್ಚೆ ಹುಟ್ಟುಹಾಕಿತ್ತು.

ಘಟನೆಯ ವಿವರ?
‘ಮೇಕ್ ಅಪ್ ಕಲಾವಿದೆ ಆಗಿರುವ ಇಂದ್ರಾಣಿ, ಜೊಮ್ಯಾಟೊ ಆಯಪ್‌ನಲ್ಲಿ ಮಂಗಳವಾರ ಮಧ್ಯಾಹ್ನ 3.30ಕ್ಕೆ ಊಟ ಆರ್ಡರ್ ಮಾಡಿದ್ದರು. ಗಂಟೆಯಾದರೂ ಆಹಾರ ಬಂದಿದರಲಿಲ್ಲ. ಹೀಗಾಗಿ, ಆರ್ಡರ್ ರದ್ದುಪಡಿಸಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರ್ಡರ್ ರದ್ದಾಗಿ ಕೆಲ ನಿಮಿಷಗಳ ನಂತರ ಸ್ಥಳಕ್ಕೆ ಬಂದಿದ್ದ ಕಾಮರಾಜ್, ತನ್ನ ಬಳಿಯ ಆಹಾರ ಕೊಟ್ಟಿದ್ದ. ತಡವಾಗಿದ್ದಕ್ಕೆ ಆರ್ಡರ್ ರದ್ದುಪಡಿಸಿರುವುದಾಗಿ ಹೇಳಿದ್ದ ಮಹಿಳೆ, ವಾಪಸು ಹೋಗುವಂತೆ ಸೂಚಿಸಿದ್ದರು. ಇದೇ ವಿಚಾರವಾಗಿ ಕಾಮರಾಜ್ ಜಗಳ ತೆಗೆದಿದ್ದ. ‘ನಾನು ನಿಮ್ಮ ಮನೆ ಗುಲಾಮನಲ್ಲ‍’ ಎಂದು ಕೂಗಾಡಿ ಯುವತಿ ಮುಖಕ್ಕೆ ಪಂಚ್ ಮಾಡಿ ಪರಾರಿಯಾಗಿದ್ದ. ಯುವತಿಯ ಮೂಗಿನಿಂದ ರಕ್ತ ಸೋರುತ್ತಿತ್ತು. ಅವರೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು, ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಘಟನೆ ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹರಿಬಿಟ್ಟಿರುವ ಮಹಿಳೆ ಇಂದ್ರಾಣಿ, ತಮ್ಮ ಮೇಲಾಗಿರುವ ಹಲ್ಲೆ ವಿವರಿಸಿ ಅಳಲು ತೋಡಿಕೊಂಡಿದ್ದಾರೆ. ‘ಇಂಥ ಘಟನೆಗಳು ಮರುಕಳಿಸಬಾರದು. ನನ್ನ ಸ್ಥಿತಿ ಬೇರೆ ಯಾರಿಗೂ ಬರಬಾರದು. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದೂ ಆಗ್ರಹಿಸಿದ್ದಾರೆ.

- Advertisement -
spot_img

Latest News

error: Content is protected !!