Wednesday, June 24, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಕೆಜಿಗಟ್ಟಲೇ ಬಂಗಾರ ಹಾಕ್ಕೊಂಡು, ಗನ್ ಮ್ಯಾನ್ ಗಳನ್ನು ಇಟ್ಕೊಂಡು ಬಿಲ್ಡಪ್ ಕೊಡ್ತಿದ್ದ ಶೋಕಿವಾಲ ಯೂಟ್ಯೂಬರ್...

ಬೆಂಗಳೂರಿನಲ್ಲಿ ಕೆಜಿಗಟ್ಟಲೇ ಬಂಗಾರ ಹಾಕ್ಕೊಂಡು, ಗನ್ ಮ್ಯಾನ್ ಗಳನ್ನು ಇಟ್ಕೊಂಡು ಬಿಲ್ಡಪ್ ಕೊಡ್ತಿದ್ದ ಶೋಕಿವಾಲ ಯೂಟ್ಯೂಬರ್ ಅರೆಸ್ಟ್

- Advertisement -
- Advertisement -

ಬೆಂಗಳೂರು : ಕೆಜಿಗಟ್ಟಲೇ ಬಂಗಾರ ಹಾಕ್ಕೊಂಡು, ಗನ್ ಮ್ಯಾನ್ ಗಳನ್ನು ಇಟ್ಕೊಂಡು, ಐಷಾರಾಮಿ ಕಾರ್ ಗಳಲ್ಲಿ ಓಡಾಕ್ಕೊಂಡು ಬಿಲ್ಡಪ್ ಕೊಡ್ತಿದ್ದ ಶೋಕಿವಾಲ ಯೂಟ್ಯೂಬರ್ ಅರೆಸ್ಟ್ ಆಗಿದ್ದಾನೆ, . ಅರುಣ್ ಕಟಾರೆ ಬಂಧಿತ ಯುಟ್ಯೂಬರ್.

ಗನ್ ಮ್ಯಾನ್, ಐಷಾರಾಮಿ ಕಾರು, ಕಂತೆ ಕಂತೆ ಹಣ, ಕೆಜಿಗಟ್ಟಲೆ ಚಿನ್ನಾಭರಣ ಹಾಕಿಕೊಂಡು ಶೋ ಮಾಡುತ್ತಿದ್ದ ಶೋಕಿವಾಲಾ ಅರುಣ್ ನನ್ನು  ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

AK-47 ಮಾದರಿ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಕೊಡುತ್ತಿದ್ದ. ಈತನ ಬಿಲ್ಡಪ್ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ.ತಕ್ಷಣ ಅರುಣ್ ಕಟಾರೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ವಿಚಾರಣೆ ವೇಳೆ ನಕಲಿ ಗನ್ ಹಿಡಿದು ಆತಂಕ ಸೃಷ್ಟಿಸಿದ್ದಕ್ಕೆ ಕೇಸ್ ದಾಖಲಾಗಿದೆ.ಶಸ್ತ್ರಾಸ್ತ್ರ ಕಾಯಿದೆ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!