Thursday, June 4, 2026
Homeಕರಾವಳಿಅಶಕ್ತರ ನೆರವಿಗೆ ವೇಷ ಹಾಕಿದ ಯುವಕರು; ಕುಪ್ಪೆಪದವಿನ ರಾಮ್‌ಸೇನಾ ವಾಯುಪುತ್ರ ಘಟಕದಿಂದ 25 ಕಿ.ಮೀ. ಕಾಲ್ನಡಿಗೆ

ಅಶಕ್ತರ ನೆರವಿಗೆ ವೇಷ ಹಾಕಿದ ಯುವಕರು; ಕುಪ್ಪೆಪದವಿನ ರಾಮ್‌ಸೇನಾ ವಾಯುಪುತ್ರ ಘಟಕದಿಂದ 25 ಕಿ.ಮೀ. ಕಾಲ್ನಡಿಗೆ

- Advertisement -
- Advertisement -

ಮಂಗಳೂರು: ಇಲ್ಲಿನ ಕುಪ್ಪೆಪದವಿನ ರಾಮ್‌ ಸೇನಾ ವಾಯುಪುತ್ರ ಘಟಕವು ‘ಭವತಿ ಭಿಕ್ಷಾಂದೇಹಿ’ ಎಂಬ ಕಾರ್ಯಕ್ರಮ ರೂಪಿಸಿದ್ದು, ನವರಾತ್ರಿಯ ಹಲವು ವೇಷಗಳನ್ನು ಧರಿಸಿ ಕುಪ್ಪೆಪದವಿನಿಂದ ಬಜಪೆವರೆಗೆ ಸುಮಾರು 25 ಕಿ.ಮೀ. ಕಾಲ್ನಡಿಗೆ ನಡೆಸಿ ಅದರಲ್ಲಿ ಸಂಗ್ರಹವಾದ 1.3 ಲಕ್ಷ ರೂ.ಯನ್ನು ನಾಲ್ವರು ಅಶಕ್ತರ ಕುಟುಂಬಗಳಿಗೆ ನೀಡಲಿದೆ.

ತಂಡವು ಅ. 3ರಂದು ಕುಪ್ಪೆಪದವು ಶ್ರೀ ದುರ್ಗೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ 8.30ಕ್ಕೆ ಗೊಂಬೆ ಹಾಗೂ ವಿಶೇಷ ವೇಷ ಧರಿಸಿ ಹೊರಟಿದ್ದು, ಕುಪ್ಪೆಪದವು ಪೇಟೆ, ಎಡಪದವು ಪೇಟೆ, ಗಂಜಿಮಠ, ಕೈಕಂಬ ಪೇಟೆ, ಪೆರಾರ, ಸುಂಕದಕಟ್ಟೆ ಮೂಲಕ ಬಜಪೆ ಪೇಟೆಗೆ ಆಗಮಿಸಿದೆ. ಬಳಿಕ ಅಲ್ಲಿಂದ ಕೈಕಂಬ ಪೇಟೆಗೆ ಕಾಲ್ನಡಿಗೆಯಲ್ಲಿ ಸಾಗಿದೆ. ಒಟ್ಟು ಸುಮಾರು 25 ಕಿ.ಮೀ. ದೂರ ಕ್ರಮಿಸಿದೆ. ತಂಡದಲ್ಲಿ ಒಟ್ಟು 30 ಮಂದಿ ಯುವಕರಿದ್ದು, ಕೆಲವರು ವೇಷ ಹಾಕಿದರೆ ಕೆಲವರು ವೇಷದೊಂದಿಗೆ ಹೋಗಿ, ಅಂಗಡಿ -ಮನೆಗಳಿಂದ ಹಣ ಸಂಗ್ರಹಿಸಿದದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!