Saturday, June 6, 2026
Homeಕರಾವಳಿಯೂತ್ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ: ಘಟನೆ ಖಂಡಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಯೂತ್ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಬಂಧನ: ಘಟನೆ ಖಂಡಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

- Advertisement -
- Advertisement -

ಮಂಗಳೂರು : ಖಾಸಗಿ ಆಸ್ಪತ್ರೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಸುಹೈಲ್ ಬಂಧನದ ಸುದ್ದಿ ತಿಳಿಯುತ್ತಲೇ ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಾಗುರಿ ಪೊಲೀಸ್ ಠಾಣೆ ಮುಂದೆ  ಜಮಾಯಿಸಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸುಹೈಲ್ ಕಂದಕ್, ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ನಿಂದ  ಮೃತಪಟ್ಟ ವ್ಯಕ್ತಿಯ ಬಿಲ್ ವಿಚಾರದಲ್ಲಿ ಆಸ್ಪತ್ರೆಯನ್ನು ಪ್ರಶ್ನಿಸಿದ್ದಕ್ಕಾಗಿ ನನ್ನ ಬಂಧನವಾಗಿದೆ.‌ ಆದರೆ ಇದು ಇಲ್ಲಿಗೆ ನಿಲ್ಲಲ್ಲ ಖಾಸಗಿ ಆಸ್ಪತ್ರೆಗಳ ಅನ್ಯಾದ ವಿರುದ್ಧ ಮತ್ತೆ ಧ್ವನಿ ಎತ್ತುತ್ತೇನೆ.ನನ್ನ ಹೋರಾಟವನ್ನು ಹತ್ತಿಕ್ಕಲು ನನ್ನ ಬಂಧನವಾಗಿದೆ, ಇದರ ಹಿಂದೆ ಬಿಜೆಪಿ ಪಕ್ಷದ ಕೈವಾಡ ಇದೆ ಎಂದ್ರು.

ಕೊರೋನಾ ಎರಡನೇ ಅಲೆ ವೇಳೆ ಕಾಂಗ್ರೆಸ್ ನಿಂದ ಜನಪರ ಕಾರ್ಯವನ್ನು ನೋಡಿ ಬಿಜೆಪಿ ಪಕ್ಷವು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಈ ರೀತಿಯ ದಬ್ಬಾಳಿಕೆಗೆ ಮುಂದಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ. ಬಿಜೆಪಿ ಪಿತೂರಿಗೆ ಬಗ್ಗುವ ಕಾರ್ಯಪಡೆ ನಮ್ಮದಲ್ಲ ಎಂದು ಎಂದಿದ್ದಾರೆ.

- Advertisement -

Latest News

error: Content is protected !!