Wednesday, June 26, 2024
HomeUncategorizedಧಾರವಾಡ: ಕೆಎಎಸ್ ಕೋಚಿಂಗ್ ಪಡೆಯಲು ಬಂದಿದ್ದ ಯುವತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ

ಧಾರವಾಡ: ಕೆಎಎಸ್ ಕೋಚಿಂಗ್ ಪಡೆಯಲು ಬಂದಿದ್ದ ಯುವತಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ

spot_img
- Advertisement -
- Advertisement -

ಧಾರವಾಡ: ಕೆಎಎಸ್ ಎಕ್ಸಾಂ ಪಾಸ್ ಮಾಡಬೇಕು, ಒಳ್ಳೆಯ ಅಧಿಕಾರಿಯಾಗಿ ಜನಸೇವೆ ಮಾಡಬೇಕು ಎಂದು ಮಹತ್ತರ ಕನಸು ಕಟ್ಟಿಕೊಂಡು ಬಾಗಲಕೋಟೆಯಿಂದ ಧಾರವಾಡಕ್ಕೆ ಬಂದ 22 ವರ್ಷದ ಯುವತಿ ದುರಂತ ಅಂತ್ಯ ಕಂಡಿದ್ದಾಳೆ.


ಬಾಗಲಕೋಟೆ ಜಿಲ್ಲೆಯ ರಬಕವಿ ತಾಲೂಕಿನ ಯರಗಟ್ಟಿ ಗ್ರಾಮದ ಗೀತಾ ಹೆಗ್ಗಣ್ಣವರ್(22) ಮೃತ ದುರ್ದೈವಿ. ಕೆಎಎಸ್ ಪರೀಕ್ಷೆಗೆ ಕೋಚಿಂಗ್ ಪಡೆಯಲೆಂದು ಧಾರವಾಡಕ್ಕೆ ಬಂದಿದ್ದ ಗೀತಾ, ಸಪ್ತಾಪುರ ಬಡಾವಣೆಯ ಅಶ್ವಿನಿ ಎಂಬ ಪಿಜಿಯಲ್ಲಿ ಉಳಿದುಕೊಂಡಿದ್ದಳು.


ಇಂದು ಬೆಳಗ್ಗೆ ಪಿಜಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಶ್ವಿನಿಯ ಶವಪತ್ತೆಯಾಗಿದೆ. ಸಾವಿಗೂ ಮುನ್ನ ಆಕೆ ಬರೆದಿಟ್ಟ ಡೆತ್ ನೋಟ್ ಪತ್ತೆಯಾಗಿದ್ದು, ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಏನಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

- Advertisement -
spot_img

Latest News

error: Content is protected !!