Thursday, June 4, 2026
Homeಕರಾವಳಿಬಂಟ್ವಾಳ:ಈಜಲು ಹೋದ ಯುವಕ ನೀರುಪಾಲು ಪ್ರಕರಣ:  ನೀರುಪಾಲಾದ ಅಶ್ವಿತ್ ಗಾಗಿ ಮುಂದುವರೆದ ಹುಡುಕಾಟ

ಬಂಟ್ವಾಳ:ಈಜಲು ಹೋದ ಯುವಕ ನೀರುಪಾಲು ಪ್ರಕರಣ:  ನೀರುಪಾಲಾದ ಅಶ್ವಿತ್ ಗಾಗಿ ಮುಂದುವರೆದ ಹುಡುಕಾಟ

- Advertisement -
- Advertisement -

ಬಂಟ್ವಾಳ: ನಿನ್ನೆ ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ  ಈಜಲು‌ ಹೋದ ಐವರು ಯುವಕರಲ್ಲಿ ಒಬ್ಬ ನೀರು ಪಾಲಾಗಿದ್ದು ಆತನಿಗಾಗಿ ಹುಟುಕಾಟ ಮುಂದುವರೆದಿದೆ. ತಲೆಮೊಗರು ನಿವಾಸಿ ರುಕ್ಮಯ ‌ಸಪಲ್ಯ ಎಂಬವರ ಮಗ ಅಶ್ವಿತ್ ನೀರು ಪಾಲಾಗಿದ್ದು ಮಳೆಯ ನಡುವೆಯೂ ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಅಶ್ವಿತ್ ಅವರ ಚಿಕ್ಕಪ್ಪ ನಾಗೇಶ್ ಅವರ ಮನೆಯಲ್ಲಿ ‌ಮಗುವಿನ ನಾಮಕರಣ ಕಾರ್ಯಕ್ರಮ ಮುಗಿಸಿ ಬಳಿಕ ಸಂಬಂಧಿಕ ಯುವಕರ ಜೊತೆ ಮನೆಯ ಸಮೀಪದಲ್ಲಿ ಹರಿಯುವ ನೇತ್ರಾವತಿ ನದಿಗೆ ಈಜಾಟಕ್ಕಾಗಿ‌ ತೆರಳಿದ್ದರು. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನೀರಿನಲ್ಲಿ ಈಜಲು ಹೋದ ಐವರು ಯುವಕರಲ್ಲಿ ಅಶ್ವಿತ್ ನೀರು ಪಾಲಾಗಿದ್ದರು.

- Advertisement -

Latest News

error: Content is protected !!