Wednesday, July 15, 2026
Homeಕರಾವಳಿಮಂಗಳೂರುವಿಟ್ಲ: ಸಂಘಕ್ಕೆ ದುಡ್ಡು ಕಟ್ಟಲು ಅಂತಾ ಹೋದ ಯುವಕ ನಾಪತ್ತೆ

ವಿಟ್ಲ: ಸಂಘಕ್ಕೆ ದುಡ್ಡು ಕಟ್ಟಲು ಅಂತಾ ಹೋದ ಯುವಕ ನಾಪತ್ತೆ

- Advertisement -
- Advertisement -

ವಿಟ್ಲ: ಸಂಘಕ್ಕೆ ದುಡ್ಡು ಕಟ್ಟಲು ಅಂತಾ ಹೋದ ಯುವಕ ನಾಪತ್ತೆಯಾಗಿರುವ ಘಟನೆ ಕಸಬಾ ಗ್ರಾಮದ ನೆಕ್ಕಿಲಾರು ಎಂಬಲ್ಲಿ ನಡೆದಿದೆ. ಹೇಮಂತ್ ( 37) ನಾಪತ್ತೆಯಾದ ಯುವಕ.

ಹೇಮಂತ್ ಎಂಬವರು ಜುಲೈ 22ರಂದು ನೆಕ್ಕಿಲಾರಿನಲ್ಲಿರುವ ತಮ್ಮ  ಮನೆಯಿಂದ ಸಂಘಕ್ಕೆ ಹಣ ಕಟ್ಟಲು ಅಂತಾ ಹೋಗಿದ್ದಾರೆ. ಹಾಗೇ  ಹೋದವರು ಮನೆಗೆ ಬಂದಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಎಂದು ಬರುತ್ತಿದ್ದು ಸಂಬಂಧಿಕರಲ್ಲಿ ವಿಚಾರಿಸಿದಾಗ  ಹೇಮಂತ್ ಪತ್ತೆಯಾಗಿಲ್ಲ ಎನ್ನಲಾಗಿದೆ.

ಹೇಮಂತ್ ರವರು ಐದೂವರೆ ಅಡಿ ಎತ್ತರವಿದ್ದು, ಕನ್ನಡ, ತುಳು ಭಾಷೆ ಮಾತನಾಡುತ್ತಾರೆ. ಗೋಧಿ ಮೈ ಬಣ್ಣ ,ಬಿಳಿ ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!