- Advertisement -
![]()
- Advertisement -
ಬೆಳ್ತಂಗಡಿ : ಉಜಿರೆ ಗ್ರಾಮದ ರೆಂಜಾಳ ನಿವಾಸಿಯಾದ ಪ್ರಮೋದ್ ಗೌಡ(37) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನ.17ರಂದು ಮುಂಜಾನೆ ನಿಧನರಾದರು.
ಪೈಂಟಿಂಗ್ ಕೆಲಸ ಮಾಡುವಾಗ ಸುಮಾರು 18 ಅಡಿ ಎತ್ತರದಿಂದ ಕುಸಿದುಬಿದ್ದು ತಲೆಯ ಭಾಗ ಹಾಗೂ ಕುತ್ತಿಗೆಯ ಸ್ಟೈನಲ್ ಕ್ವಾರ್ಡ್(spinal cord) ಸಂಪೂರ್ಣವಾಗಿ ಮುರಿತಕ್ಕೊಳಗಾಗಿದ್ದು ಕಳೆದ ಒಂದು ತಿಂಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ಮೃತರು ಪತ್ನಿ, ಹೆಣ್ಣು ಮಗು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.
- Advertisement -


