Monday, June 8, 2026
Homeಕರಾವಳಿಪುತ್ತೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವು

ಪುತ್ತೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವು

- Advertisement -
- Advertisement -

ಪುತ್ತೂರು: ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿರುವ ಘಟನೆ ಸುಬ್ರಹ್ಮಣ್ಯ-ಮಂಜೇಶ್ವರ ಹೆದ್ದಾರಿಯ ನರಿಮೊಗರು ಸಮೀಪ ನಡೆದಿದೆ. ಗೌತಮ್ (26) ಮೃತ ಯುವಕ.

ಭಾನುವಾರ ರಾತ್ರಿ ಸವಣೂರಿನಿಂದ ಸೌಂಡ್ಸ್‌ ಸಿಸ್ಟಮ್‌ ಹೊತ್ತ ಪಿಕಪ್‌ ವಾಹನ ಪುತ್ತೂರು ಕೆಮ್ಮಾಯಿ ಕಡೆ ಬರುತ್ತಿದ್ದಾಗ ನರಿಮೊಗರು ಶಾಲಾ ಬಳಿ ತಲುಪುತ್ತಿದ್ದಂತೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೈಕ್‌ ನಡುವೆ ಢಿಕ್ಕಿಯಾಗಿದೆ.  ಢಿಕ್ಕಿಯ ರಭಸಕ್ಕೆ ಬೈಕ್‌ ಸವಾರ ಸುಳ್ಯ ಕೊಡಿಯಾಲ ನಿವಾಸಿ ಲೋಲಾಕ್ಷ ಮತ್ತು ಸಹಸವಾರ ಚೊಕ್ಕಾಡಿ ಮೂಲದ ಗೌತಮ್‌ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.

ಗೌತಮ್ ಅವರನ್ನು ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಗೌತಮ್ ಡಿಸೆಂಬರ್ 23 ರಂದು ಮೃತಪಟ್ಟಿದ್ದಾರೆ. ಪಿಕಪ್‌ ಚಾಲಕ ಧನಂಜಯ್ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!