Sunday, June 7, 2026
Homeಕರಾವಳಿಬೆಳ್ತಂಗಡಿ: ಔಷಧೀಯ ಸಸ್ಯ ತರಲು ಕಾಡಿಗೆ ಹೋದ ವ್ಯಕ್ತಿ ಕುಸಿದು ಬಿದ್ದು ಸಾವು

ಬೆಳ್ತಂಗಡಿ: ಔಷಧೀಯ ಸಸ್ಯ ತರಲು ಕಾಡಿಗೆ ಹೋದ ವ್ಯಕ್ತಿ ಕುಸಿದು ಬಿದ್ದು ಸಾವು

- Advertisement -
- Advertisement -

ಬೆಳ್ತಂಗಡಿ: ಔಷಧೀಯ ಸಸ್ಯ ತರಲು ಕಾಡಿಗೆ ಹೋದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಪೊಲೀಸ್‌ ಠಾಣೆ ವ್ಯಾಪ್ತಿಯ ಪೊದಿಂಬಿಲ ಎಂಬಲ್ಲಿ ನಡೆದಿದೆ

ಇಲ್ಲಿನ ನಿವಾಸಿ ಆನಂದ ಆಚಾರ್ಯ ಅವರ ಪುತ್ರ ರಾಜೇಶ್‌ ಆಚಾರ್ಯ (38) ಮೃತ ದುರ್ದೈವಿ. ಆನಂದ ಅವರು ಡಿ. 23 ರಂದು ಮಾಲ್ಯಳ ಕಾಡಿಗೆ ಮದ್ದಿನ ಸೊಪ್ಪು ತರಲು ಹೋದವರು ಆಕಸ್ಮಿಕವಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಆನಂದ ಅವರು ಮನೆಯಿಂದ ಹೋದವರು ಮನೆಗೆ ವಾಪಸಾಗದೆ ಇದ್ದಾಗ ಮನೆಯವರು ಮತ್ತು ಸಾರ್ವಜನಿಕರು ಹುಡುಕಾಟದ ನಡೆಸುವ ವೇಳೆ ಕಲ್ಲಿನ ಮಧ್ಯೆ ಸಿಲುಕಿದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಬೆಳ್ತಂಗಡಿಯ ಬೆಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!