Thursday, June 4, 2026
Homeಕರಾವಳಿವಿಟ್ಲದ ಕೆಲಿಂಜದಲ್ಲಿ ಯುವಕ ಸಾವು

ವಿಟ್ಲದ ಕೆಲಿಂಜದಲ್ಲಿ ಯುವಕ ಸಾವು

- Advertisement -
- Advertisement -

ವಿಟ್ಲ ಕೆಲಿಂಜದಲ್ಲಿ ಯುವಕನೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.ಕೆಲಿಂಜ ಪಾತ್ರತೋಟ ನಿವಾಸಿ ಶರೀಫ್ (34)ಮೃತರು.

ಶರೀಫ್ ಕಳೆದ ಕೆಲ ವರ್ಷಗಳಿಂದ ಎರಡೂ ಕಿಡ್ನಿ ವೈಫಲ್ಯವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು.ಇತ್ತೀಚೆಗೆ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆಯು ಕಂಡು ಬಂದಿತ್ತು.ಆದರೆ ಇದೀಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.

ಶರೀಫ್ ಕುಟುಂಬಸ್ಥರ ಜೊತೆ ಜಾವಗಳ್ ದರ್ಗಾಕ್ಕೆ ತೆರಳಿದ್ದರು ಎನ್ನಲಾಗಿದೆ.ಬಳಿಕ ತೀವ್ರವಾಗಿ ಅಸ್ವಸ್ಥಗೊಂಡಿದ್ದರು.ಅವರನ್ನು ಅರಸೀಕೆರೆ ಆಸ್ಪತ್ರೆಗೆ ಸಾಗಿಸಲಾಗಿತ್ತು.ಈ ವೇಳೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!