Saturday, June 27, 2026
Homeಕರಾವಳಿಉಪ್ಪಿನಂಗಡಿ: ಲಾರಿಗೆ ಬೈಕ್ ಡಿಕ್ಕಿ, ಬೈಕ್ ಸವಾರ ಸಾವು

ಉಪ್ಪಿನಂಗಡಿ: ಲಾರಿಗೆ ಬೈಕ್ ಡಿಕ್ಕಿ, ಬೈಕ್ ಸವಾರ ಸಾವು

- Advertisement -
- Advertisement -

ಪ್ಪಿನಂಗಡಿ: ಲಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ ಸಮೀಪದ ಕೋಣಾಲು ಗ್ರಾಮದ ಕೋಲ್ಪೆ ಎಂಬಲ್ಲಿ ನಡೆದಿದೆ. ದೀಕ್ಷಿತ್‌ (23) ಮೃತ ಬೈಕ್ ಸವಾರ.

ಕರೋಪಾಡಿ ನಿವಾಸಿ ದೀಕ್ಷಿತ್‌, ಗುರುವಾರ ಬೈಕಿನಲ್ಲಿ ಹೋಗುತ್ತಿದ್ದಾಗ ಕೋಲ್ಪೆ ಮಸೀದಿ ಬಳಿ ಬೈಕ್‌ ಸವಾರನ ಹತೋಟಿ ತಪ್ಪಿ ಲಾರಿಯ ಮುಂಭಾಗಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸತ್ರೆಗೆ ದಾಖಲಿಸಲಾಯಿತ್ತಾದರೂ, ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದಾರೆ. ಕೋಲ್ಪೆ ನಿವಾಸಿ ಇಸ್ಮಾಯಿಲ್‌ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.

- Advertisement -

Latest News

error: Content is protected !!