- Advertisement -
- Advertisement -
ಚಿಕ್ಕಮಗಳೂರು; ಪ್ರೇಮಿಗಳು ಸಂಚರಿಸುತ್ತಿದ್ದ ಬೈಕ್ ಕ್ಯಾಂಟರ್ ಗೆ ಡಿಕ್ಕಿಯಾಗಿ ಯುವಕ ಸಾವನ್ನಪ್ಪಿ ಯುವತಿಯ ನಾಲಿಗೆ ಕಟ್ ಆಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ನಡೆದಿದೆ. ಶಿವರಾಜ್(26) ಮೃತ ದುರ್ದೈವಿ, ಲಾವಣ್ಯ(20) ನಾಲಿಗೆ ಕಳೆದುಕೊಂಡ ಯುವತಿ.
ಲಾವಣ್ಯ ಹಾಗೂ ಶಿವರಾಜ್ ಬೈಕ್ ನಲ್ಲಿ ಹೋಗುತ್ತಿರುವಾಗ ಎದುರು ಕಡೆಯಿಂದ ಬಂದ ಕ್ಯಾಂಟರ್ ಗೆ ಮುಖಾಮುಖಿ ಢಿಕ್ಕಿ ಆಗಿದೆ. ಪರಿಣಾಮ ಈ ಘಟನೆ ನಡೆದಿದೆ.ಶಿವರಾಜ್-ಲಾವಣ್ಯ ಇಬ್ಬರು ಅರಸೀಕೆರೆ ತಾಲೂಕಿನ ಬಂದೂರು ಮೂಲದವರು. ಲಾವಣ್ಯ ಚಿಕ್ಕಮಗಳೂರಿನ ವಿದ್ಯಾರ್ಥಿ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದಾರೆ.ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -