Wednesday, June 3, 2026
Homeಕರಾವಳಿಮಂಗಳೂರುಬಂಟ್ವಾಳ: ಕುಕ್ಕಾಜೆ ಜಂಕ್ಷನ್‌ ಬಳಿ ಬೈಕ್ ಗೆ ಆಪೆ ರಿಕ್ಷಾ ಡಿಕ್ಕಿ: ಬೈಕ್‌ ಸವಾರ ಸಾವು

ಬಂಟ್ವಾಳ: ಕುಕ್ಕಾಜೆ ಜಂಕ್ಷನ್‌ ಬಳಿ ಬೈಕ್ ಗೆ ಆಪೆ ರಿಕ್ಷಾ ಡಿಕ್ಕಿ: ಬೈಕ್‌ ಸವಾರ ಸಾವು

- Advertisement -
- Advertisement -

ಬಂಟ್ವಾಳ: ಬೈಕ್ ಗೆ ಆಪೆ ರಿಕ್ಷಾ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ಸಾಲೆತ್ತೂರು-ಮಾರ್ನಬೈಲು ಸಂಪರ್ಕ ರಸ್ತೆಯ ಕುಕ್ಕಾಜೆ ಜಂಕ್ಷನ್‌ ಬಳಿ ನಡೆದಿದೆ. ಇರಾ ಗ್ರಾಮದ ಕುಕ್ಕಾಜೆಬೈಲ್‌ ನಿವಾಸಿ, ಅಶೋಕ ಎಂಬುವವರ ಪುತ್ರ ಮನೀಶ್‌ (22) ಮೃತ ಯುವಕ.
ಮಂಚಿಯಲ್ಲಿರುವ ವಿಕಾಸ್‌ ಶಾಮಿಯಾನ ಸಂಸ್ಥೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು . ಮನೀಶ್‌ ಅವರು ಸಾಲೆತ್ತೂರಿನಿಂದ ಕುಕ್ಕಾಜೆ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಎದುರಿನಿಂದ ಬಂದ ಆಪೆ ರಿಕ್ಷಾ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್‌ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ಪಟ್ಟರೂ ದಾರಿಮಧ್ಯೆಯೇ ಯುವಕ ಕೊನೆಯುಸಿರೆಳೆದಿದ್ದಾರೆ.
ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿದ್ದಾರೆ.

- Advertisement -

Latest News

error: Content is protected !!