Sunday, June 7, 2026
Homeಕರಾವಳಿ ಸುಳ್ಯ; ಅನಾರೋಗ್ಯ ಹಿನ್ನೆಲೆ ಔಷಧಿ ತರಲೆಂದು ಹೋಗುತ್ತಿದ್ದಾಗ ಯುವಕ ಹೃದಯಾಘಾತವಾಗಿ ಸಾವು

 ಸುಳ್ಯ; ಅನಾರೋಗ್ಯ ಹಿನ್ನೆಲೆ ಔಷಧಿ ತರಲೆಂದು ಹೋಗುತ್ತಿದ್ದಾಗ ಯುವಕ ಹೃದಯಾಘಾತವಾಗಿ ಸಾವು

- Advertisement -
- Advertisement -

ಸುಳ್ಯ; ಅನಾರೋಗ್ಯ ಹಿನ್ನೆಲೆ ಔಷಧಿ ತರಲೆಂದು ಹೋಗುತ್ತಿದ್ದಾಗ ಯುವಕ ಹೃದಯಾಘಾತವಾಗಿ ಯುವಕ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ನಿಂತಿಕಲ್ಲು ಎಂಬಲ್ಲಿ ನಡೆದಿದೆ.ಮಡಿಕೇರಿ ತಾಲೂಕು ಚೆಂಬು ಗ್ರಾಮದ ಆನ್ಯಾಳ ನಿವಾಸಿ ಚಂದ್ರಶೇಖರ್ ಪೂಜಾರಿ(35) ಮೃತ ದುರ್ದೈವಿ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೇ ತೀವ್ರ ನಿಂತ್ರಾಣಗೊಂಡಿದ್ದರು ಎನ್ನಲಾಗಿದೆ. ಹಾಗಾಗಿ ಆಟೋದಲ್ಲಿ ಮದ್ದಿಗೆಂದು ನಿಂತಿಕಲ್ಲಿಗೆ ಕರೆದುಕೊಂಡು ಹೋಗಿ ವಾಪಾಸ್ ಬರುವಾಗ ದಾರಿ ಮಧ್ಯೆ ಅಸ್ಪಸ್ಥಗೊಂಡಿರುವುದಾಗಿ ಹೇಳಲಾಗಿದೆ.

ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತರು ಮೂವರು ಸಹೋದರಿಯರು, ಓರ್ವ ಸಹೋದರನನ್ನು ಅಗಲಿದ್ದಾರೆ

- Advertisement -

Latest News

error: Content is protected !!