Wednesday, June 3, 2026
Homeಕರಾವಳಿಉಡುಪಿಉಡುಪಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಉಡುಪಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

- Advertisement -
- Advertisement -

ಉಡುಪಿ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ. ಸೋನಿತ್ ಪೂಜಾರಿ(30) ಮೃತ ದುರ್ದೈವಿ.

ಪೈಂಟಿಂಗ್ ಕೆಲಸ ಮಾಡುತ್ತಿದ್ದ ಸೋನಿತ್ ಪೂಜಾರಿ ಅಣ್ಣ ಅತ್ತಿಗೆಯೊಂದಿಗೆ ಅವರಾಲು ಮಟ್ಟು ರಸ್ತೆಯ ಬೀಡು ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅಣ್ಣ ಅತ್ತಿಗೆ ಕೆಲಸಕ್ಕೆ ಹೋಗುತ್ತಿದ್ದು, .  ನಿನ್ನೆ ಕೆಲಸಕ್ಕೆ ಹೋಗದ ಸೋನಿತ್ ಸಂಜೆ ಸುಮಾರು ಐದು ಗಂಟೆಯ ವರಗೆ ಪೇಟೆಯಲ್ಲೇ ಇದ್ದರು. ಬಳಿಕ ಮತ್ತೆ ಮನೆಗೆ ಮರಳಿದ್ದರು. ಇವರ ಅತ್ತಿಗೆ ಆರೂವರೆ ಗಂಟೆಗೆ ಕೆಲಸ ಬಿಟ್ಟು ಮನೆಗೆ ಬಂದಾಗ ಬಾಗಿಲ ಚಿಲಕ ಒಳಗಿಂದ ಹಾಕಿತ್ತು.  ಬೆಲ್ ಮಾಡಿದರೂ ತೆರೆಯದಿದ್ದಾಗ ಕಿಟಕಿ ಮೂಲಕ ನೋಡಿದಾಗ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.

 ಸ್ಥಳಕ್ಕೆ ಬಂದ ಪಡುಬಿದ್ರಿ ಎಸ್ಸೈ ಪುರುಷೋತ್ತಮ್ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!